ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊಲೆ ಪ್ರಕರಣ- ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮುಲ್ಕಿ : ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡ್ ಗ್ರಾಮದ ವನಭೋಜನ ಬಳಿ ಕಳೆದ 2020 ಜನವರಿ30ರಂದು ನಡೆದ ಶರಣಪ್ಪ (31) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಬಿಹಾರ ಮೂಲದ ಸನ್ನಿಬಾಬು ಮತ್ತು ಗಲ್ಲುರಾಮ ಅಲಿಯಾಸ್ ಸಚಿನ್ ಎಂಬವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ 2020ನೇ ಜನವರಿ 30ರಂದು ರಾತ್ರಿ ಸುಮಾರು 10 ಗಂಟೆಗೆ ಮುಲ್ಕಿ ಸಮೀಪದ ಕಾರ್ನಾಡ್ ವನಭೋಜನ ಬಳಿ ಮೃತ ಶರಣಪ್ಪನು ಆರೋಪಿಗಳಿಗೆ ಹಾಗೂ ಆರೋಪಿಗಳ ತಂದೆ -ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಗಳು ಶರಣಪ್ಪನ ಕುತ್ತಿಗೆಗೆ ಚೂರಿಯಿಂದ ಕೊಲೆಮಾಡಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಆರೋಪಿಗಳನ್ನು, ವಿಚಾರಣೆ ನಡೆಸಿದ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್•ವಿ ರವರು ಒಂದು ಮತ್ತು ಎರಡನೇ ಆರೋಪಿಗಳಿಗೆ ಕಲಂ 302 ಐಪಿಸಿ ಗೆ ಜೀವಾವಧಿ ಶಿಕ್ಷೆ ಮತ್ತು ತಲಾ 10000 ದಂಡ, ಹಾಗೂ 341ಐಪಿಸಿ ಗೆ 01 ತಿಂಗಳ ಸಾದಾ ಸಜೆ ತಲಾ 500ರೂ ದಂಡ ವಿಧಿಸಿದೆ. ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನುಅಂದಿನ ಮುಲ್ಕಿ ಠಾಣಾ ಪಿ ಐ ಜಯರಾಮ್ ಗೌಡ ರವರು ಸಲ್ಲಿಸಿದ್ದು ತನಿಖಾ ಸಹಾಯಕರಾಗಿ ASI ಉಮೇಶ್ ರವರು ಸಹಕರಿಸಿದ್ದು .ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಮೊತಿಲಾಲ್ ಚೌದರಿರವರು ಸಾಕ್ಷಿಗಳನ್ನು ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

20/12/2024 08:02 pm

Cinque Terre

2.64 K

Cinque Terre

0

ಸಂಬಂಧಿತ ಸುದ್ದಿ