ಮಂಗಳೂರು : ನಾಗಿಣಿ ಸೀರಿಯಲ್ ಖ್ಯಾತಿಯ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಾಳು ದೀಪಿಕಾ ದಾಸ್ ಮಂಗಳೂರು ಹೊರವಲಯದ ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಗೆ ಭೇಟಿ ನೀಡಿದ್ದಾರೆ.
ತಮ್ಮ ಹೊಸ ಸಿನಿಮಾದ ಯಶಸ್ಸಿಗಾಗಿ ಪ್ರಾರ್ಥಿಸಿದರು.
ಬಳಿಕ ಮಾತನಾಡಿದ ನಟಿ, 'ಹ್ಯಾಷ್ ಟ್ಯಾಗ್ ಪಾರು ಪಾರ್ವತಿ' ಸಿನಿಮಾ ಜನವರಿ ತಿಂಗಳಲ್ಲಿ ತೆರೆಕಾಣಲಿದೆ. ಚಿತ್ರದ ಯಶಸ್ಸಿಗಾಗಿ ಅಜ್ಜನಲ್ಲಿ ಪ್ರಾರ್ಥಿಸಿರುವೆನು. ಮಂಗಳೂರು ಎಂದರೆ ದೈವ-ದೇವರ ನಾಡು, ಪ್ರತಿಬಾರಿಯೂ ಬಂದಾಗ ಇಲ್ಲಿ ಭೇಟಿ ಕೊಡುತ್ತೇನೆ ಎಂದರು.
ತುಳುನಾಡಿನ ಕಲೆ ಯಕ್ಷಗಾನ, ಕೋಲ ಎಲ್ಲವೂ ಚಿತ್ರದಲ್ಲಿದ್ದು, ಮೂರು ತಿಂಗಳಲ್ಲಿ ಅದು ಕೂಡಾ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಅಜ್ಜನ ಹಾಗೂ ದೇವರ ಆಶೀರ್ವಾದದಿಂದ ಎರಡೂ ಚಿತ್ರಗಳಲ್ಲಿ ಕತೆಯೇ ನಾಯಕನಾಗಿದ್ದು, ಮಹಿಳಾ ಪ್ರಧಾನ ಕತೆಯಾಧಾರಿತದ್ದಾಗಿದೆ. ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಕ್ಷೇತ್ರಕ್ಕೆ ಈ ಹಿಂದೆ ಭೇಟಿ ಕೊಟ್ಟಿರುವೆ. ಕಲ್ಲಾಪು ಬುರ್ದುಗೋಳಿಗೆ ಪ್ರಥಮ ಭೇಟಿಯಾಗಿದ್ದು ಬಹಳಷ್ಟು ಖುಷಿಯಾಯಿತು ಎಂದರು.
Kshetra Samachara
22/12/2024 09:24 am