ಪುತ್ತೂರು: ಇಲ್ಲಿನ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ನಗರದ ಬೈಪಾಸ್‌ನಲ್ಲಿ ಭಾನುವಾರ ರಸ್ತೆಗಡ್ಡಲಾಗಿ ಬಂದ ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸುಲು ಹೋಗಿ ಇಲೆಕ್ಟ್ರಿಕ್ ಆಟೋರಿಕ್ಷಾ ಮಗುಚಿಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಪುತ್ತೂರು ನಗರದ ಬೊಳುವಾರು ನಿವಾಸಿ ಸೂರ್ಯ ಕುಮಾರ್ ಚೆಟ್ಟಿಯಾರ್ (64) ಮೃತಪಟ್ಟ ದುರ್ದೈವಿ. ಈ ವೇಳೆ ಆಟೋರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸೂರ್ಯ ಕುಮಾರ್ ಅವರ ಪತ್ನಿ ವೇಲುಮಣಿ ನೀಡಿರುವ ದೂರಿನಂತೆ ಪುತ್ತೂರು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
22/12/2024 10:00 pm