ಉಡುಪಿ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಯೇಸು ಕ್ರಿಸ್ತನ ಜನನದ ಕಥೆಯನ್ನು ನೃತ್ಯ ರೂಪಕದ ಮೂಲಕ ಸುಂದರವಾಗಿ ಅನಾವರಣಗೊಳಿಸಲಾಯಿತು. ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಕೊರಿಯನ್ ತಂಡದಿಂದ ಈ ಪ್ರದರ್ಶನ ನಡೆಯಿತು.
“ಕ್ರಿಸ್ಮಸ್ ಕ್ರಿಸ್ತೋತ್ಸವ -2024” ಕಾರ್ಯಕ್ರಮದಲ್ಲಿ ಕೊರಿಯದ ಸುಮಾರು 60 ಕಲಾವಿದರ ತಂಡ ವಿಶಿಷ್ಟವಾದ ಧ್ವನಿ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ಅದ್ಭುತ ಪ್ರದರ್ಶನ ನೀಡಿದರು.
ಯೇಸುವಿನ ಜನನದ ಕಥೆಯನ್ನು 60 ಮಂದಿ ಕೊರಿಯನ್ ಹಾಗೂ ಬೆಂಗಳೂರಿನ ಕಲಾವಿದರ ತಂಡವು ಪ್ರಸ್ತುತಪಡಿಸಿತು.ಕನ್ನಡ ಭಾಷೆಯ ಹಾಡುಗಳು ಮತ್ತು ಸಂಗೀತದಿಂದ ಕೂಡಿದ ನೃತ್ಯರೂಪಕವನ್ನು ಧ್ವನಿ ಮತ್ತು ಬೆಳಕಿನ ಪ್ರದರ್ಶನದೊಂದಿಗೆ ನೆರೆದಿದ್ದ ಸಭಿಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಗರದ ಜನರು ಭಾಗವಹಿಸಿದ್ದರು.
PublicNext
22/12/2024 07:05 am