ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು:; ತ್ರಾಸಿ ಬೀಚಿನಲ್ಲಿ ವಾಟರ್ ಸ್ಪೋರ್ಟ್ಸ್ ಜಸ್ಕಿ ರೈಡರ್ ಸಮುದ್ರದಲ್ಲಿ ನಾಪತ್ತೆ!

ಬೈಂದೂರು: ಬೇಲುಗ ವಾಟರ್ ಸ್ಪೋರ್ಟ್ಸ್ ಜಸ್ಕಿ ರೈಡರ್ ಶನಿವಾರ ಸಂಜೆಯ ವೇಳೆ ಪ್ರವಾಸಿಗರನ್ನು ಸಮುದ್ರದಲ್ಲಿ ರೈಡ್‌ಗೆ ಕರೆದುಕೊಂಡು ಹೋದಾಗ ಅಬ್ಬರದ ಸಮುದ್ರದ ಅಲೆಗೆ ಜಸ್ಕಿ ಪಲ್ಟಿಯಾಗಿದೆ. ಪರಿಣಾಮ ಜಸ್ಕಿ ರೈಡರ್ ರವಿ ಎಂಬ ವ್ಯಕ್ತಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಪ್ರಕರಣ ನಡೆದಿದೆ.

ಸಮುದ್ರದಲ್ಲಿ ಜಸ್ಕಿ ರೈಡ್‌ಗೆ ಹೋದ ಪ್ರವಾಸಿಗ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ.

ಸ್ಥಳಕ್ಕೆ ಗಂಗೊಳ್ಳಿ ಕರಾವಳಿ ಕಾವಲು ಪಡೆ ಪೊಲೀಸ್, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

Edited By : Nagesh Gaonkar
PublicNext

PublicNext

21/12/2024 10:51 pm

Cinque Terre

31.55 K

Cinque Terre

0