ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಾನಂಗಳದಲ್ಲಿ ಹಾರಾಟಕ್ಕೆ ಸುವರ್ಣಾವಕಾಶ - ಹೆಲಿಕಾಪ್ಟರ್ ಏರಿ ನೋಡಬಹುದು ಕುಡ್ಲದ ಸೌಂದರ್ಯ

ಮಂಗಳೂರು: ಕಡಲನಗರಿ ಮಂಗಳೂರು ಕರಾವಳಿ ಉತ್ಸವಕ್ಕೆ ಸಜ್ಜಾಗುತ್ತಿದೆ. ಇದರ ಅಂಗವಾಗಿ ಜಿಲ್ಲಾಡಳಿತ ಹೆಲಿಟೂರಿಸಂ ಆಯೋಜಿಸಿದ್ದು, ಈ ಮೂಲಕ ಕುಡ್ಲದ ಸೌಂದರ್ಯವನ್ನು ಬಾನಂಗಳದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ನಗರದ ಮೇರಿಹಿಲ್ ಹೆಲಿಪ್ಯಾಡ್‌ನಲ್ಲಿ‌ ಹೆಲಿಟೂರಿಸಂಗೆ ಚಾಲನೆ ದೊರಕಿದೆ. ತುಂಬಿ ಏರ್ ಟ್ಯಾಕ್ಸ್ ಕಂಪೆನಿಯ ಸಹಯೋಗದೊಂದಿಗೆ ದ‌ಕ್ಷಿಣ ಕನ್ನಡ ಜಿಲ್ಲಾಡಳಿತ ಹೆಲಿಟೂರಿಸಂ ಅನ್ನು ಆಯೋಜಿಸಿದೆ. ಸ್ವತಃ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ., ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಎಸ್ಪಿ ಯತೀಶ್ ಸೇರಿದಂತೆ ಅಧಿಕಾರಿಗಳು ದ.ಕ.ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ನಗರದ ಸೌಂದರ್ಯವನ್ನು ‌ಮೇಲಿನಿಂದ ಕಣ್ತುಂಬಿಕೊಂಡರು.

ಬಾನಂಗಳದಲ್ಲಿ ಕುಡ್ಲದ ಸೌಂದರ್ಯ ವೀಕ್ಷಿಸಲು ಬಯಸುವವರಿಗೆ ಡಿಸೆಂಬರ್ 21ರಿಂದ 31ರವರೆಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶವಿದೆ. 6-7 ನಿಮಿಷಗಳ ಕಾಲ ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ಮಂಗಳೂರು ನಗರ, ನೇತ್ರಾವತಿ ನದಿ ತೀರ, ಪಣಂಬೂರು ಬೀಚ್ ಸೌಂದರ್ಯವನ್ನು ವೀಕ್ಷಿಸಬಹುದು. ಪ್ರತೀ ರೌಂಡ್‌ನಲ್ಲಿ ಆರುಮಂದಿಗೆ ಹೆಲಿಕಾಪ್ಟರ್ ಸುತ್ತಾಟಕ್ಕೆ ಅವಕಾಶವಿದೆ. ಇದಕ್ಕೆ ಕೇವಲ 4,500 ರೂ. ಪಾವತಿಸಿದರೆ ಸಾಕು ಯಾರು ಬೇಕಾದರೂ ಹೆಲಿಕಾಪ್ಟರ್ ಪ್ರಯಾಣ ಮಾಡಬಹುದು. www.helitaxii.comನಲ್ಲಿ ಆನ್‌ಲೈನ್ ಬುಕ್ಕಿಂಗ್‌ ಮಾಡಬಹುದು.

ಈ ಹೆಲಿಟೂರಿಸಂ ಸಕ್ಸಸ್ ಆದಲ್ಲಿ, ಮುಂದಕ್ಕೆ ಇದನ್ನು ಮತ್ತಷ್ಟು ವಿಸ್ತರಿಸುವ ಚಿಂತನೆ ಜಿಲ್ಲಾಡಳಿತದಲ್ಲಿದೆ. ಈ ಮೂಲಕ ದಕ್ಷಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು ಸೇರಿದಂತೆ ಬೇಳೂರು - ಹಳೆಬೀಡು, ಬೇಕಲ್ ಪೋರ್ಟ್‌ಗಳಿಗೂ ಹೆಲಿಟೂರಿಸಂ ಅಳವಡಿಸುವ ಉದ್ದೇಶವಿದೆ. ಆದರೆ 6-7ನಿಮಿಷದ ಸಂಚಾರಕ್ಕೆ 4,500ರೂ. ದರ ನಿಗದಿಸಿದ್ದು ಕೊಂಚ ದುಬಾರಿಯೆನಿಸಿದೆ. ದರ ಇಳಿಕೆ ಮಾಡಿದ್ದಲ್ಲಿ ಜನಸಾಮಾನ್ಯರೂ ಇದರ ಸದ್ಬಳಕೆ ಮಾಡಬಹುದು. ಈ ಮೂಲಕ ಮಂಗಳೂರಿನ ಪ್ರವಾಸಕ್ಕೊಂದು ಹೆಲಿಟೂರಿಸಂನ ಗರಿ ಮೂಡಲಿದೆ.

Edited By : Nagesh Gaonkar
PublicNext

PublicNext

21/12/2024 07:38 pm

Cinque Terre

25.81 K

Cinque Terre

0

ಸಂಬಂಧಿತ ಸುದ್ದಿ