ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಕುಟುಂಬಗಳ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಣೆ

ಮುಲ್ಕಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಕುಟುಂಬಗಳ ಅರ್ಹ ಫಲಾನುಭವಿಗಳಿಗೆ , ನಿಧಿ-1ರ ಶೇಕಡಾ 25, ಹಾಗೂ ಅಂಗವಿಕಲರ ಶೇಕಡಾ 5 ರ ಅನುದಾನದಿಂದ  ವಿದ್ಯಾರ್ಥಿ ವೇತನ, ಶವಸಂಸ್ಕಾರ ಸಹಾಯಧನ, ವೈದ್ಯಕೀಯ ವೆಚ್ಚದ ಸಹಾಯಧನವನ್ನು ಪಂಚಾಯತ್‌ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್‌ ರವರು ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಹೇಮನಾಥ ಅಮೀನ್‌, ಸದಸ್ಯರಾದ ಮೋಹನದಾಸ್‌, ವಿನೋದ್‌ ಎಸ್‌ ಸಾಲ್ಯಾನ್‌, ದಿನೇಶ್‌ ಶೆಟ್ಟಿ, ಉಮೇಶ್‌ ಪೂಜಾರಿ, ಅನಿಲ್‌ ಯಾನೆ ಸೀತಾರಾಮ, ಸಂತೋಷ್‌ ಅಮೀನ್‌, ಹರಿಪ್ರಸಾದ್‌, ಮಂಜುಳಾ,ಪ್ರಮೀಳಾ ಡಿ ಶೆಟ್ಟಿ, ಶ್ರೀಮತಿ ಪುಷ್ಪಾ ಯಾನೆ ಶ್ವೇತಾ, ವಿಜಯಲಕ್ಷ್ಮೀ . ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸುಧೀರ್‌, ಕಾರ್ಯದರ್ಶಿ ಸುಜಾತ ಎಚ್.‌  ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/12/2024 11:07 am

Cinque Terre

1.21 K

Cinque Terre

0