ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಳ್ಳದು - ಸಂಸದ ಕೋಟ

ಉಡುಪಿ: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಂಜೆ ಮತ್ತು ಬೆಳಿಗ್ಗಿನ ಪೀಕ್ ಅವರ್ ನಲ್ಲಿ ಜನರು ಸ್ವಲ್ಪ ಪರದಾಡಬೇಕಿದೆ. ಆದರೆ ಪ್ರಾರಂಭದಲ್ಲಿ ಸವಾರರಲ್ಲಿದ್ದ ಟ್ರಾಫಿಕ್ ಗೊಂದಲ ಈಗ ನಿವಾರಣೆಯಾಗಿದೆ. ಕರಾವಳಿ ಬೈಪಾಸ್‌ನಲ್ಲಿ ಟ್ರಾಫಿಕ್ ಜಾಮ್ ಅಧಿಕವಿದ್ದು, ಇದಕ್ಕೆ ಇನ್ನೊಂದು ಕಾರಣ ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ. ಕಾಮಗಾರಿಗೆ ಸಂಬಂಧಿಸಿ ಸ್ಥಳೀಯರು ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ.

ಈ ಕುರಿತು ಸಂಸದ ಕೋಟ ಪ್ರತಿಕ್ರಿಯೆ ನೀಡಿದ್ದು, ಅಂಬಲಪಾಡಿ ರಾ.ಹೆ. ಕಾಮಗಾರಿಗೆ ಸಂಬಂಧಿಸಿದಂತೆ ಪರ ವಿರೋಧ ಅಭಿಪ್ರಾಯವಿದ್ದು, ನ್ಯಾಯಯುತ ತೀರ್ಮಾನ ಮಾಡಿ ಕಾಮಗಾರಿ ಮುಂದುವರಿಸುತ್ತೇವೆ ಅಂತ ಹೇಳಿದ್ದಾರೆ. ಕಾಮಗಾರಿ ಕುರಿತು ಜನರ ಅಭಿಪ್ರಾಯ, ಅಧಿಕಾರಿಗಳಿಂದ ಮಾಹಿತಿಯನ್ನೂ ಈಗಾಗಲೇ ಸಂಗ್ರಹಿಸಲಾಗಿದೆ. ಮೇಲ್ಸೇತುವೆ ಕಾಮಗಾರಿಯಲ್ಲಿ ಕೆಲವು ಕಡೆ ಪಿಲ್ಲರ್‌ಗಳು ಬೇಕೆಂಬ ಬಗ್ಗೆ ಬೇಡಿಕೆ ಇದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಆದರೆ ಯಾವುದೇ ಕಾರಣಕ್ಕೂ ಕಾಮಗಾರಿ ಸ್ಥಗಿತಗೊಳ್ಳದು ಎಂದು ಸ್ಪಷ್ಟಪಡಿಸಿದರು.

Edited By : Suman K
Kshetra Samachara

Kshetra Samachara

21/12/2024 02:00 pm

Cinque Terre

2.83 K

Cinque Terre

4