ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಸ್ ಚಾಲಕ ನಿರ್ವಾಹಕರು ಊರಿನ ರಾಯಭಾರಿಗಳು - ಭುವನಾಭಿರಾಮ ಉಡುಪ

ಮುಲ್ಕಿ: ಕಿನ್ನಿಗೋಳಿ ಬಸ್ಸು ಚಾಲಕ ನಿರ್ವಾಹಕ ಸಂಘದ 12ನೇ ವಾರ್ಷಿಕೋತ್ಸವ ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ ಬಸ್ ಚಾಲಕ ನಿರ್ವಾಹಕರು ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಉತ್ತಮ ಸೇವೆ ನೀಡುವ ಊರಿನ ರಾಯಭಾರಿಗಳು ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ,ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಮಾಜೀ ತಾಲೂಕ್ ಪಂಚಾಯತ್ ಸದಸ್ಯ ದಿವಾಕರ ಕರ್ಕೇರ, ಇಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಕಾಶ್ ಕಿನ್ನಿಗೋಳಿ ,ಬಸ್ ಚಾಲಕ ನಿರ್ವಾಹಕರ ಸಂಘದ ಗೌರವಾಧ್ಯಕ್ಷ ಭಾಸ್ಕರ ಪೂಜಾರಿ, ಅಧ್ಯಕ್ಷ ಸಂದೀಪ್ ಅಂಚನ್, ಕಾರ್ಯದರ್ಶಿ ಕ್ಯಾನ್ಯೂಟ್ ಕ್ಯಾಸ್ತೆಲಿನೋ,(ಕೋನಿ), ಕೋಶಾಧಿಕಾರಿ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು ಶರತ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯ ಯೋಗೇಶ್ ಎಸ್ ಆರ್, ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಎಎಸ್ಐ ಸಂಜೀವ ರವರನ್ನು ಸನ್ಮಾನಿಸಲಾಯಿತು ಮತ್ತು ಬಸ್ ಚಾಲಕ ನಿರ್ವಾಹಕರವರನ್ನು ಗೌರವಿಸಲಾಯಿತು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Edited By : PublicNext Desk
Kshetra Samachara

Kshetra Samachara

22/12/2024 07:56 am

Cinque Terre

298

Cinque Terre

0

ಸಂಬಂಧಿತ ಸುದ್ದಿ