ಮುಲ್ಕಿ: ಹಳೆಯಂಗಡಿ ಗ್ರಾಪಂ, ಕಚೇರಿಗೆ ಕಳೆದ ತಿಂಗಳ ಹಿಂದೆ ಉಪಲೋಕಾಯುಕ್ತ ನ್ಯಾಯಮೂರ್ತಿ ದಾಳಿ ನಡೆಸಿದ ಸಂದರ್ಭ ಲೋಕಾಯುಕ್ತ ಬಗ್ಗೆ ಮಾಹಿತಿ ಫಲಕವನ್ನು ತಕ್ಷಣ ಪಂಚಾಯಿತಿ ಎದುರು ಹಾಕಲು ಸೂಚಿಸಿದ್ದರು. ಆದರೆ ಪಂಚಾಯಿತಿ ಆಡಳಿತ ಲೋಕಾಯುಕ್ತ ಬೇಟಿಯ ಪಂಚಾಯತ್ ಎದುರು ಹಾಕುವ ಬದಲು ಯಾರಿಗೂ ಕಾಣಿಸದಂತೆ ಶೌಚಾಲಯದ ಬಾಗಿಲ ಬಳಿ ಹಾಕಿರುವುದಕ್ಕೆ ಗುರುವಾರ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದಲೇ ತೀವ್ರ ಆಕ್ಷೇಪ ಕೇಳಿ ಬಂತು.
ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಧನರಾಜ್ ಕೋಟ್ಯಾನ್, ಅಬ್ದುಲ್, ಅಜೀಜ್, ಸುಕೇಶ್, ಚಂದ್ರ ಕುಮಾರ್ ಮತ್ತಿತರರು ನಾನಾ ಸಮಸ್ಯೆಗಳ ಬಗ್ಗೆ ಮಾತನಾಡಿದರು.
Kshetra Samachara
21/12/2024 11:16 am