ಮುಲ್ಕಿ: ಅತಿಕಾರಿಬೆಟ್ಟು ಕೊಲಕಾಡಿ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕೆಪಿಎಸ್‌ಕೆ ಶ್ರೀ ಗಣಪತಿ ಶಣೈ ಕಲಾಮಂದಿರದ ವೇದಿಕೆಯಲ್ಲಿ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಉದ್ಯಮಿ ವಾಸು ಪೂಜಾರಿ ಮಾತನಾಡಿ ಕನ್ನಡ ಮಾಧ್ಯಮಶಾಲೆಗಳ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಸಂಘದ ಕೊಡುಗೆ ಅಪಾರ ಶಾಲೆಯ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಂಬೈ ಅಮೆರಿಕನ್ ಲೈಬ್ರೇರಿಯ ನಿವೃತ್ತ ಗ್ರಂಥಪಾಲಕ ಶಶಿಧರ್ ಶೆಟ್ಟಿ ಪಂಜಿನಡ್ಕ, ಉದ್ಯಮಿ ಸಂತೋಷ್ ಶೆಟ್ಟಿ ಪರಂಕಿಲ ಸೌದಿ ಅರೇಬಿಯಾ, ಮುಂಬೈ ಉದ್ಯಮಿ ಪ್ರಮೋದ್ ಆಳ್ವ, ಉಡುಪಿ ಸ.ಪ.ಪೂ. ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಛಾಯಾ ಶೆಟ್ಟಿ, ಕೊಂಕಣ ರೈಲ್ವೆ ಟಿಟಿಇ ಗಿರೀಶ್ ಎ ಜಿ ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತಿನ್ ಶೆಟ್ಟಿ ಪಂಜಿನಡ್ಕ ಪದಾಧಿಕಾರಿಗಳಾದ ಗಂಗಾಧರ ಶೆಟ್ಟಿ, ಬರ್ಕೆ ತೋಟ, ರಂಗನಾಥ ಶೆಟ್ಟಿ, ಕೊಲಕಾಡಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಅಂಬರೀಶ್ ಲಮಾಣಿ, ನಿವೃತ್ತ ಮುಖ್ಯೋಪಾಧ್ಯಾಯ ನಾಗಭೂಷಣ್ ರಾವ್
ಶಿಕ್ಷಕ ವೆಂಕಟರಮಣ ಕಾಮತ್ ಫಲಿಮಾರ್, ನಿತಿನ್ ಪ್ರಕಾಶ್ ಸುಜನಾಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಕಳೆದ 26 ವರ್ಷಗಳಿಂದ ಹಿಂದಿ ಶಿಕ್ಷಕರಾಗಿ ಕೆಪಿಎಸ್‌ಕೆ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಚಂದ್ರಶೇಖರ್ ರಾಥೋಡ್ ರವರನ್ನು ಗೌರವಿಸಲಾಯಿತು ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಹಸ್ತ, ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ದೀಪಿಕಾ ನಿರೂಪಿಸಿದರು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು
Kshetra Samachara
22/12/2024 07:25 am