ಉಡುಪಿ: ಭಗವದ್ಗೀತೆಯಲ್ಲಿ ಧ್ಯಾನ ಯೋಗದ ಮಹತ್ವವನ್ನು ಗೀತಾಚಾರ್ಯ ಭಗವಾನ್ ಶ್ರೀಕೃಷ್ಣ ವಿಷದವಾಗಿ ವಿವರಿಸಿದ್ದಾನೆ. ಇದನ್ನು ಮನಗಂಡ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿವರ್ಷ ಡಿಸೆಂಬರ್ 21 ವಿಶ್ವ ಧ್ಯಾನ ದಿನವೆಂದು ಘೋಷಿಸಿದ್ದು ಆ ಪ್ರಾಕಾರ ಇಂದು ಪ್ರಪ್ರಥಮ ವಿಶ್ವ ಧ್ಯಾನ ದಿನಾಚರಣೆಯು ಶ್ರೀ ಕೃಷ್ಣಮಠ, ಪರ್ಯಾಯ ಪುತ್ತಿಗೆ ಮಠ, ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಯೋಗ ಸಂಸ್ಥೆಗಳ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ಪರ್ಯಾಯ ಶ್ರೀ ಸುಗಣೇಂದ್ರ ತೀರ್ಥಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಮುಂದೊಂದು ದಿನ ವಿಶ್ವದಾದ್ಯಂತ ಭಗವದ್ಗೀತಾ ಜಯಂತಿ ದಿನಾಚರಣೆ ನಡೆಯಲಿ. ಗೀತಾಚಾರ್ಯನ ನುಡಿಗಳು ನಡೆಯಲ್ಲಿ ಮೂಡಿ ಬರಲಿ ಎಂದು ಆಶೀರ್ವಚನದಲ್ಲಿ ತಿಳಿಸಿದರು.
ಪತಂಜಲಿಯ ಮಂಡಲ ಪ್ರಭಾರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬೀಜ ಮಂತ್ರ ಸಹಿತವಾಗಿ ಅಷ್ಟ ಚಕ್ರದ ಧ್ಯಾನ ನಡೆಸಿಕೊಟ್ಟರು. ಪತಂಜಲಿ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್ , ಪತಂಜಲಿ ಯೋಗ ಶಿಕ್ಷಣ ಸಮಿತಿಯ ಆರ್ ಜಿ.ಬಿರದಾರಣ್ಣ, ಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿಯ ಅಮಿತ್ ಕುಮಾರ್ ಶೆಟ್ಟಿ ಮತ್ತಿರರು ಉಪಸ್ಥಿತರಿದ್ದರು. ನೂರಾರು ಭಕ್ತರು ಧ್ಯಾನ ದಿನದಲ್ಲಿ ಪಾಲ್ಗೊಂಡರು.
Kshetra Samachara
21/12/2024 02:28 pm