ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ವಾರ್ಷಿಕ ಹರಕೆ ಸೇವೆ

ಬ್ರಹ್ಮಾವರ: ಚಾಂತಾರು ನಂದಿಗುಡ್ಡೆ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ವಾರ್ಷಿಕ ಹರಕೆ ಸೇವೆಯು ನಾನಾ ಭಾಗದ ಭಕ್ತರಿಂದ ಜರುಗಿತು. ಶನಿವಾರ ಬೆಳಿಗ್ಗೆ ಇಲ್ಲಿನ ಪಂಚಮುಖಿ ನಾಗದೇವರಿಗೆ ತನು ಸೇವೆ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳಿಗೆ ಪೂಜೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಸಂಜೆ ದೀಪಾರಾಧನೆ ಮತ್ತು ಭಜನಾ ಸೇವೆ ಜರುಗಿತು.

ದೈವಸ್ಥಾನದ ಆಡಳಿತ ಮೋಕ್ತೇಸರ ವಿಶ್ವನಾಥ್ ಶೆಟ್ಟಿ, ಮೊಕ್ತೇಸರ ತಾರಾನಾಥ್ ಶೆಟ್ಟಿ, ವ್ಯವಸ್ಥಾಪಕ ಐತಪ್ಪ ಶೆಟ್ಟಿಗಾರ್,ಗೌರವ ಕಾರ್ಯದರ್ಶಿಚಂದ್ರ ಶೇಖರ ಕಿಣಿ, ಖಜಾಂಚಿ ಉದಯ, ಗುರಿಕಾರರಾದ ಅಪ್ಪು ಮೇಸ್ತ್ರಿ, ಮತ್ತು ಗುರಿಕಾರ ವರ್ಗದವರು ನೇತೃತ್ವವಹಿಸಿದ್ದರು.

ನಾನಾ ಭಾಗದ ಭಕ್ತರಿಂದ ನಾನಾ ಸೇವೆಗಳು ಜರುಗಿತು ಸಹಸ್ರಾರು ಭಕ್ತಾಧಿಗಳು ಅನ್ನ ಸಂತರ್ಪಣೆ ಮತ್ತು ಪೂಜೆಯಲ್ಲಿ ಭಾಗವಹಿಸಿದ್ದರು. ಭಾನುವಾರ ಕ್ಷೇತ್ರದ ಬಾಳ ಭಂಡಾರದೊಂದಿಗೆ ಬಲಿ ಸೇವೆ ಮತ್ತು ಪರಿವಾರ ದೈವಗಳ ದರ್ಶನ ಸೇವೆ ಜರುಗಲಿದೆ.

Edited By : Suman K
Kshetra Samachara

Kshetra Samachara

21/12/2024 05:53 pm

Cinque Terre

1.23 K

Cinque Terre

0

ಸಂಬಂಧಿತ ಸುದ್ದಿ