ಮುಲ್ಕಿ:ಕಧೋಲಿಕ್ ಸಭಾ ಮಂಗಳೂರು ಉತ್ತರ ವಲಯದ ಸಹಭಾಗಿತ್ವದಲ್ಲಿ ಕ್ರಿಸ್ಮಸ್ ಬಂಧುತ್ವ
2024 ಕಾರ್ಯಕ್ರಮ ಕಿನ್ನಿಗೋಳಿಯ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಷಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಆಧುನಿಕಯುಗದ ಕಾಲಘಟ್ಟದಲ್ಲಿ ಯುವ ಜನಾಂಗ ಸರ್ವ ಧರ್ಮದ ಸಾಮರಸ್ಯದ ಬದುಕಿನ ಮೂಲಕ ಜೀವನದಲ್ಲಿ ಸಾಧಕರಾಗಬೇಕು ಎಂದರು
ಮುಖ್ಯ ಅತಿಥಿಗಳಾಗಿ ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ವೇ.ಮೂ. ಕಮಲಾದೇವಿ ಆಸ್ರಣ್ಣ, ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಮೌಲಾನ ಯು.ಕೆ ಅಬ್ದುಲ್ ಅಜೀಜ್ ದಾರಿಮಿ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಆಧ್ಯಾತ್ಮಿಕ ನಿರ್ದೇಶಕರಾದ ವಂ ಪಾದರ್ ಓಸ್ವಾಲ್ಡ್ ಮೊಂತೆರೋ,
ಮಂ. ಪಾ.ಆಲ್ಬನ್ ಡಿಸಿಲ್ವ,
ಮೆಲ್ರೀಡ ಜೇನ್ ರೊಡ್ರಿಗಸ್, ಗ್ರೇಟ್ಟಾ ಫೆರ್ನಾಂಡಿಸ್,ವಿಲಿಯಂ ಡಿಸೋಜ, ಮೇಬಲ್ ಶಾಂತಿ ಮಾರ್ಟಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಕ್ಯಾರಲ್ಸ್ ಹಾಡುಗಳು ನ್ರತ್ಯ ರೂಪಕಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ರೆನಿಸ್ಯ ಡಿಸೋಜ ಕಾರ್ಯಕ್ರಮ ನಿರೂಪಿಸಿ ಮೇಬಲ್ ಶಾಂತಿ ಮಾರ್ಟಿಸ್ ಧನ್ಯವಾದ ಅರ್ಪಿಸಿದರು.
Kshetra Samachara
21/12/2024 09:42 pm