ಬ್ರಹ್ಮಾವರ: ಬ್ರಹ್ಮಾವರ ಹಂದಾಡಿ ಕುಮ್ರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿಗಳ ಮತ್ತು ಊರವರ ಸಹಕಾರದಿಂದ ಶತಮಾನೋತ್ಸವ ಸಂಭ್ರಮದ ಅಂಗವಾಗಿ ನಿರ್ಮಾಣಗೊಂಡ ನೂತನ ಆರು ತರಗತಿ ಕೊಠಡಿಗಳನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.
ಈ ಸಂದರ್ಭ ಶತಮಾನೋತ್ಸವ ಸಮಿತಿಯ ಅಧ್ಯಕ್ಷೆ ಶಾಲಾ ಹಳೆ ವಿದ್ಯಾರ್ಥಿನಿ ಸುಶೀಲಾ ರೈ ಮಾತನಾಡಿ, ಹಳೆ ವಿದ್ಯಾರ್ಥಿಗಳು ಒಂದಾದರೆ ಎಲ್ಲಾ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.
ಹಳೆ ವಿದ್ಯಾರ್ಥಿ ನಿಶ್ಚಿತ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಶಾಲೆಯಲ್ಲಿ ನಿವೃತ್ತರಾದ ಶಿಕ್ಷಕರನ್ನು ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಿತು. ೮೦ ವರ್ಷದ ಹಳೆ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಇಂದಿನ ವಿದ್ಯಾರ್ಥಿಗಳು ಒಂದಾಗಿ ಬೆರೆತ ಕ್ಷಣಗಳು ಕಂಡು ಬಂತು.
ಹಂದಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ, ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಗಣ್ಯರಾದ ಡಾ.ಮೋಹನ್ ದಾಸ್ ಶೆಟ್ಟಿ, ರಾಜಾರಾಮ ಶೆಟ್ಟಿ ಗಾಳಿಮನೆ, ನವೀನ್ ಚಂದ್ರ ಶೆಟ್ಟಿ, ಡಾ. ವಿಕ್ರಂ ಶೆಟ್ಟಿ, ಡಾ. ಸುಭಾಷ್ ಚಂದ್ರ, ಪಾಲಾಕ್ಷ ಮೂರ್ತಿ ಶತಮಾನೋತ್ಸವ ಸಮಿತಿಯ ಶ್ರೀನಿವಾಸ ಶೆಟ್ಟಿ, ರಾಜೇಶ್ ಶೆಟ್ಟಿ, ಗುರುರಾಜ್, ಪ್ರಜ್ವಲ್ ಉಪಸ್ಥಿತರಿದ್ದರು.
ಬೈಟ್: ಸುಶೀಲಾ ರೈ, ಶತಮಾನೋತ್ಸವ ಸಮಿತಿಯ ಅಧ್ಯಕ್ಷೆ, ಶಾಲಾ ಹಳೆ ವಿದ್ಯಾರ್ಥಿ
ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್, ಬ್ರಹ್ಮಾವರ
Kshetra Samachara
22/12/2024 02:22 pm