ಬ್ರಹ್ಮಾವರ: ಮಾಸ್ತಿ ಅಮ್ಮನವರ ದೇವಸ್ಥಾನ ಧರ್ಮಶಾಲೆ ಬಾರಕೂರು ಇಲ್ಲಿನ ಮಾಸ್ತಿ ದುರ್ಗಾ ಚಿಣ್ಣರ ಬಳಗದ ವಿಂಶತಿ ಮತ್ತು ಮಾಸ್ತಿ ದುರ್ಗಾ ಮಹಿಳಾ ಬಳಗದ ಪಂಚಮ ವರ್ಷದ ಅಂಗವಾಗಿ ಭಾನುವಾರ ಭಜನಾ ಉತ್ಸವ ಜರುಗಿತು.
ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ತನಕ ಪರಿಸರದ ಕುಣಿತ ಭಜನೆ ತಂಡ ಸೇರಿದಂತೆ 10 ತಂಡದಿಂದ ಭಜನೆ ಜರುಗಿತು. ಇದೇ ಸಂದರ್ಭದಲ್ಲಿ ಭಜನೆ ಗುರು ರಾಘವೇಂದ್ರ ರಾವ್ ಅವರಿಗೆ ಗುರುವಂದನೆ ಜರುಗಿತು. ಭಜನೆಯಲ್ಲಿ ತೊಡಗಿಸಿಕೊಂಡ 5 ಮಂದಿ ಮಹಿಳೆಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.
ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಅನುವಂಶಿಕ ಆಡಳಿತ ಮೊಕ್ತೇಸರ ಅನಂತಪದ್ಮನಾಭ, ಆಡಳಿತ ಮಂಡಳಿಯ ಡಾ.ರಾಘವೇಂದ್ರ ರಾವ್, ಚಂದ್ರ ಕುಮಾರ್, ಭಜನಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂರಾರು ಮಂದಿ ಭಜನಾ ಉತ್ಸವದಲ್ಲಿ ಭಾಗವಹಿಸಿದರು.
PublicNext
22/12/2024 08:37 pm