ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಸುರಕ್ಷತೆಯ ಹಿನ್ನೆಲೆಯಲ್ಲಿ ಘನ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿದ್ದರೂ, ಕ್ಯಾರೇ ಎನ್ನದೆ ಚಾಲಕ ಏಕಾಏಕಿ ನುಗ್ಗಿಸಿ ಗೂಡ್ಸ್ ವಾಹನವೊಂದು ಸಿಲುಕಿಕೊಂಡು ಪರಿಪಾಟಲು ಪಟ್ಟ ಘಟನೆ ನಡೆದಿದೆ.
ಬಿ.ಸಿ.ರೋಡ್‌ನಿಂದ ಗೂಡಿನಬಳಿಯಾಗಿ ಪಾಣೆಮಂಗಳೂರು ಕಡೆಗೆ ಟಾಟಾ ಏಸ್ ಗೂಡ್ಸ್ ವಾಹನ ಸಂಚರಿಸುತ್ತಿತ್ತು. ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಘನ ವಾಹನಗಳಿಗೆ ಸಂಚಾರ ನಿಷೇಧವಿತ್ತು. ಆದರೂ ಚಾಲಕ ಸೇತುವೆಯೊಳಗೆ ಬಲವಂತವಾಗಿ ನುಗ್ಗಿಸಿದ್ದಾನೆ. ಪರಿಣಾಮ ಸೇತುವೆಯ ಮೇಲಿನ ಘನ ವಾಹನ ಸಂಚಾರಕ್ಕೆ ತಡೆಯೊಡ್ಡಿ ಹಾಕಲಾಗಿದ್ದದ ಕಬ್ಬಿಣದ ತಡೆಬೇಲಿಯಲ್ಲಿ ವಾಹನ ಸಿಲುಕಿಕೊಂಡಿದೆ. ಆದ್ದರಿಂದ ಚಾಲಕ ಬಲವಂತವಾಗಿ ಮೂವ್ ಮಾಡಿದಾಗ ಟಾಟಾಏಸ್ ಗೂಡ್ಸ್ ಟೆಂಪೋ ಸೇತುವೆಯಲ್ಲಿ ತಲೆ ಮೇಲಾಗಿ ನಿಂತಿದೆ. ಕೊಂಚಹೊತ್ತು ಏನೇ ಮಾಡಿದರೂ ವಾಹನ ಜಗ್ಗದೆ ಒಟ್ಟು ಪೀಕಲಾಟವಾಗಿ ಪರಿಣಮಿಸಿತ್ತು.
ಕೊನೆಗೇ ಹೇಗೋ ವಾಹನ ಮೂವ್ ಆಗಿ ಮುಂದಕ್ಕೆ ಸಾಗಿದೆ. ಇದನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಅದರ ವೀಡಿಯೋ ವೈರಲ್ ಆಗಿದೆ. ಘಟನೆಯಲ್ಲಿ ಚಾಲಕ ಯಾವುದೇ ಗಾಯವಿಲ್ಲದೆ ಅಪಾಯವಿಲ್ಲದೆ ಪಾರಾಗಿದ್ದಾನೆ.
PublicNext
22/12/2024 11:51 am