This is a modal window.
Beginning of dialog window. Escape will cancel and close the window.
End of dialog window.
ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಕೋವಿಡ್ ವ್ಯಾಕ್ಸಿನ್ ಎಂದು ಕೇಂದ್ರ ಸರ್ಕಾರದ ಮೇಲೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಅವರು, ಕೋವಿಡ್ ವೇಳೆ ದೇಶದಲ್ಲಿ 45 ಲಕ್ಷ ಜನ ಸತ್ತರು. ಇದರ ಜವಾಬ್ದಾರಿಯನ್ನು ಮೋದಿ ಹೊತ್ತುಕೊಳ್ತಾರಾ..? ಬಳ್ಳಾರಿ ಬಾಣಂತಿಯರ ಸಾವು ಪ್ರಕರಣಕ್ಕೆ ಸರ್ಕಾರವೇ ಕಾರಣ ಎಂದು ಬಿಜೆಪಿ ಆರೋಪ ಮಾಡ್ತಿದೆ. ಎರಡೂ ಸದನಗಳಲ್ಲಿ ಸುದೀರ್ಘ ಚರ್ಚೆಯಾಗಿದೆ. ಬಾಣಂತಿಯರ ಸಾವಿನ ಬಗ್ಗೆ ಆರೋಗ್ಯ ಸಚಿವರು ಸಮರ್ಪಕ ಉತ್ತರ ಕೊಟ್ಟಿದ್ದಾರೆ. ಆದ್ರೆ ನೀವೇ ಕಾರಣ, ನೀವೇ ಕೊಲೆಗಾರರು ಅಂತ ಬಿಜೆಪಿ ಶಾಸಕರು ಆರೋಪಿಸಿದ್ದಾರೆ.
ಹಾಗಿದ್ರೆ ಕೋವಿಡ್ ಸಂದರ್ಭದಲ್ಲಿನ ಸಾವುಗಳಿಗೆ ಪ್ರಧಾನಿ ಮೋದಿ ಕಾರಣ ಹೊರುತ್ತಾರಾ..? ಕೋವಿಡ್ ಸಾವುಗಳ ಬಗ್ಗೆ ಒಂದು ದಿನವೂ ಚರ್ಚೆಯಾಗಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರೋ ಕಡೆ ಒಂದು ಸಣ್ಣ ಘಟನೆ ನಡೆದರೂ ಮುಗಿಬಿದ್ದು ಬೈಯುತ್ತಾರೆ. ಇದು ಬಿಟ್ಟರೆ ಬಿಜೆಪಿಯವರಿಗೆ ಬೇರೇನೂ ಗೊತ್ತಿಲ್ಲ ಎಂದು ಸಂತೋಷ್ ಲಾಡ್ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/12/2024 05:30 pm