ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ತಡಕೋಡದ ಮೂಲಕ ಸಿ.ಟಿ ರವಿ ಅವರನ್ನು ಬೆಳವಡಿಗೆ ಕರೆದೊಯ್ದ ಪೊಲೀಸರು

ಧಾರವಾಡ: ಬೆಳಗಾವಿ ಸುವರ್ಣಸೌಧದ ಮೇಲ್ಮನೆಯಲ್ಲಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹಿರೇಬಾಗೇವಾಡಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಸಿ.ಟಿ.ರವಿ ಅವರನ್ನು ಪೊಲೀಸರು ಬೆಳಗಿನಜಾವದವರೆಗೂ ಸುತ್ತಾಡಿಸಿದ್ದಾರೆ.

ಚೆನ್ನಮ್ಮನ ಕಿತ್ತೂರಿನಿಂದ ಧಾರವಾಡ ಜಿಲ್ಲೆಯ ತಡಕೋಡ ಗ್ರಾಮದ ಮೇಲೆ ಹಾಯ್ದು ಮುಂದೆ ಅವರನ್ನು ಮತ್ತೆ ಬೆಳಗಾವಿ ಜಿಲ್ಲೆಯ ಬೆಳವಡಿಗೆ ಕರೆದುಕೊಂಡು ಹೋಗಿದ್ದಾರೆ.

ನಿನ್ನೆ ಮಧ್ಯರಾತ್ರಿ 1-30ರ ಸುಮಾರಿಗೆ ಕಿತ್ತೂರಿನಿಂದ ಕರೆದುಕೊಂಡು ಬಂದ ಪೊಲೀಸರು ಅಲ್ಲಿಂದ ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಮುಖಾಂತರ ಹಾಯ್ದು ಮುಂದೆ ಬೆಳವಡಿಗೆ ಕರೆದುಕೊಂಡು ಹೋಗಿದ್ದಾರೆ. ನಿನ್ನೆ ಒಂದೇ ರಾತ್ರಿಯಲ್ಲಿ ಸಿ.ಟಿ.ರವಿ ಅವರನ್ನು ಬೆಳಗಾವಿ, ಬಾಗಲಕೋಟೆ, ಧಾರವಾಡ ಜಿಲ್ಲೆಯ ಗಡಿ ಭಾಗದಲ್ಲೆಲ್ಲ ಸುತ್ತಾಡಿಸಿದ್ದಾರೆ.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/12/2024 12:46 pm

Cinque Terre

43.73 K

Cinque Terre

6

ಸಂಬಂಧಿತ ಸುದ್ದಿ