ಹುಬ್ಬಳ್ಳಿ: ತರಾತುರಿಯಲ್ಲಿ ಸಿ.ಟಿ. ರವಿ ವಿರುದ್ಧ ಎಫ್ ಐ ಆರ್ ಮಾಡಲಾಗಿದೆ. ಕಾಮನ್ ಸೆನ್ಸ್ ಬೇಡ್ವಾ ಬೆಳಗಾವಿ ಕಮಿಷನರ್ ಗೆ. ಬೆಳಗಾವಿ ಕಮಿಷನರ್ ಅನ್ ಫಿಟ್ ಇದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಖಾನಾಪೂರದಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಜೊತೆಗೆ ಕಮಿಷನರ್ ಯಾಕೆ ಮಾತನಾಡಿಲ್ಲ. ಸಂವಿಧಾನಕರ ಹುದ್ದೆಯಲ್ಲಿರುವ ವಿಪಕ್ಷ ನಾಯಕ ಆರ್. ಅಶೋಕ್ ರನ್ನು ಸಹ ಖಾನಾಪೂರ ಠಾಣೆಗೆ ಬಿಟ್ಟಿಲ್ಲ. ಛಲವಾದಿ ನಾರಾಯಣಸ್ವಾಮಿ ಹರಿಜನ ಅಂತ ಅವರ ಜೊತೆಗೆ ಕಮಿಷನರ್ ಹಾಗೇ ನಡೆದುಕೊಂಡ್ರಾ..? ನಾವು ಯಾವತ್ತೂ ಅಸ್ಪೃಶ್ಯತೆಯನ್ನು ಬೆಂಬಲಿಸಿಲ್ಲ ಎಂದರು.
ಬೆಳಗಾವಿ ಪೊಲೀಸರು ಛಲವಾದಿ ನಾರಾಯಣಸ್ವಾಮಿ ಆ ಜನಾಂಗದವರು ಅಂತ ಆ ರೀತಿ ನಡೆದುಕೊಂಡಿರಬಹದು. ಸಿ.ಟಿ. ರವಿ ಅವರನ್ನ ಫೇಕ್ ಎನ್ ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ..? ಕಬ್ಬಿನ ಗದ್ದೆಗೆ, ಕಂಕರ್ ಮಿಶಿನ್ ಗೆ , ಅರಣ್ಯಕ್ಕೆ ಯಾಕೆ ಸಿ.ಟಿ. ರವಿ ಅವರನ್ನು ಕರೆದುಕೊಂಡು ಹೋಗಿದ್ದರು. ಮಾಧ್ಯಮದವರು ಸಾಹಸ ಮಾಡಿ ಸಿ.ಟಿ. ರವಿ ಅವರನ್ನು ಬೆನ್ನು ಹತ್ತಿದಕ್ಕೆ ಸಿ.ಟಿ. ರವಿ ಉಳಿದಿದ್ದಾರೆ. ಇದು ಅತ್ಯಂತ ದ್ವೇಷ ರಾಜಕಾರಣ ಎಂದರು.
ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತಮ್ಮ ಜೇಬಿನಲ್ಲಿ ಸಂವಿಧಾನ ಇಟ್ಟುಕೊಂಡು ಓಡಾಡುತ್ತಾರೆ. ಹಾಗಿದ್ದರೇ ಅವರ ಉದ್ದೇಶ ಏನು..? ನೀವು ಬಳ್ಳಾರಿಗೆ ಹೋಗಿ ತೊಡೆ ತಟ್ಟಿದಾಗ ನಮ್ಮ ಸರ್ಕಾರ ಇತ್ತು ಆಗ ಪೊಲೀಸರ ರಕ್ಷಣೆ ನಡಿತಲ್ವಾ..? ಅಂಬೇಡ್ಕರ್ ಅಪಮಾನ ಮಾಡುವಾಗ ಕಾಂಗ್ರೆಸ್ಸಿನವರಿಗೆ ಯಾವ ನಾಯಿ ಕಡಿದಿತ್ತು..? ವಿವಿಧ ಸಂದರ್ಭದಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವಾಗ ಏನು ನಾಯಿ ಕಡಿದಿತ್ತಾ..? ಕಾಂಗ್ರೆಸ್ ನವರು ನಾಯಿ ಕಡಿದವರಂತೆ ವರ್ತನೆ ಮಾಡುತ್ತಿದ್ದಾರೆ. ಸಿ.ಟಿ. ರವಿ ಪ್ರಕರಣದ ಬಗ್ಗೆ ರಾಜ್ಯ ಗೃಹ ಸಚಿವರಿಗೆ ಏನು ಗೊತ್ತಿಲ್ಲ ಅಂದ್ರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/12/2024 02:33 pm