ಹುಬ್ಬಳ್ಳಿ: ಸಿ.ಟಿ.ರವಿ ಅವರನ್ನ ಫೇಕ್ ಎನ್‌ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ..? ಮತ್ತೆಕೆ
ಕಬ್ಬಿನ ಗದ್ದಗೆ, ಕಂಕರ್ ಮಿಷನ್‌ಗೆ, ಅರಣ್ಯಕ್ಕೆ ಸಿಟಿ ರವಿ ಅವರನ್ನು ಕರೆದುಕೊಂಡು ಹೋಗಿದ್ದು, ಎಂದು ಕೇಂದ್ರ ಸಚಿವ ಜೋಶಿ ಪ್ರಶ್ನಿಸಿದ್ದಾರೆ. ಮಾಧ್ಯಮವರು ಸಾಹಸ ಮಾಡಿ ಸಿಟಿ ರವಿ ಅವರನ್ನು ಬೆನ್ನತ್ತಿದ್ದಕ್ಕೆ ಸಿಟಿ ರವಿ ಉಳಿದಿದ್ದಾರೆ ಎಂದು ಹೇಳಿದರು.
ಸಿ.ಟಿ ರವಿ ಬಂಧನಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಫೇಕ್ ಎನಕೌಂಟರ್ ಮಾಡುವ ಉದ್ದೇಶದಿಂದ ನಿರ್ಜನ ಪ್ರದೇಶದ ಕಡೆಗೆಲ್ಲಾ ಸಿ.ಟಿ.ರವಿಯವರನ್ನು ಕರೆದುಕೊಂಡು ಹೋಗಿದ್ರಾ..? ಎಂದು ಪ್ರಶ್ನಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/12/2024 03:24 pm