ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಧಿವೇಶನ ಲಾಠಿ ಪ್ರಹಾರದಿಂದ ಆರಂಭವಾಗಿ ಮಾನಸಿಕ ಹಿಂಸೆಯಿಂದ ಅಂತ್ಯವಾಗಿದೆ - ಬೊಮ್ಮಾಯಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಅಭಿವೃದ್ಧಿ ಇಲ್ಲದೆ ಬೆಳಗಾವಿ ಅಧಿವೇಶನ ಕಾಟಾಚಾರಕ್ಕೆ ನಡೆಸಲಾಗಿದೆ. ಅಧಿವೇಶನ ಪಂಚಮಸಾಲಿ ಲಾಠಿ ಪ್ರಹಾರದಿಂದ ಆರಂಭವಾಗಿ ಸಿಟಿ ರವಿ ಅವರ ಮಾನಸಿಕ ಹಿಂಸೆಯಿಂದ ಮುಗಿತು. ಅಂದರೆ ಪೊಲೀಸರ ಲಾಠಿಯಿಂದ ಆರಂಭಗೊಂಡು‌ ಪೊಲೀಸರ ಹಿಂಸೆಯಿಂದ ಅಂತ್ಯವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪೋಲಿಸ್ ರಾಜ್ಯ ಇದೆ ಎನ್ನುವುದಕ್ಕೆ ಇದು ಸಾಕ್ಷಿ. ಹಿರಿಯ ಅಧಿಕಾರಿಗಳು ಲಾಠಿ ಹಿಡಿದಿದ್ದು ಚಾರ್ಜ್ ಮಾಡಿದ್ದು ತನಿಖೆ ಆಗಬೇಕು. ಹಿರಿಯ ಅಧಿಕಾರಿಗಳು ಕಾನ್ಸ್‌ಟೇಬಲ್ ಗಳ ತರ ವರ್ತನೆ ಮಾಡುತ್ತಿದ್ದಾರೆ.‌ ಕರ್ನಾಟಕ ಪೊಲೀಸರಿಗೆ ಒಳ್ಳೆಯ ಹೆಸರು ಇದೆ.‌ ಆದರೆ ಆ ಪೊಲೀಸರನ್ನು ಬಳಿಸಿಕೊಂಡು ಈ ರೀತಿ ವರ್ತನೆ ತೋರಲಾಗುತ್ತಿದೆ ಎಂದರು.

ಉತ್ತರ ಕರ್ನಾಟಕದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಿಲ್ಲ. ನಮ್ಮ ಪಕ್ಷದ ನಾಯಕರು ಮಾಡಿದ ಪ್ರಶ್ನೆಗೆ ರಾಜ್ಯ ಸರ್ಕಾರದ ಮಂತ್ರಿಗಳು ಉತ್ತರ ಸಹ ನೀಡಿಲ್ಲ, ಇದು ನಾಚಿಕೆ ಸಂಗತಿ. ಈ ಸರಕಾರದ ನಕ್ಷೆಯಲ್ಲಿ ಉತ್ತರ ಕರ್ನಾಟಕವೇ ಇಲ್ಲ ಎಂಬ ಅನುಮಾನ ಮೂಡಿದೆ. ಉತ್ತರ ಕರ್ನಾಟಕ ಜನರ ಕಣ್ಣಿಗೆ ಮಣ್ಣುಹಾಕುವ ಕಾರ್ಯ ಪದೇ ಪದೇ ಈ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಡುಗಾಟದ ರೀತಿಯಲ್ಲಿ ಅಧಿವೇಶನ ನಡೆದಿದೆ. ನಮ್ಮ ಪಕ್ಷದ ನಾಯಕರು ಸಮರ್ಥವಾಗಿ ಸದನ ನಿಭಾಯಿಸಿದ್ದಾರೆ. ಆದರೆ ಸರ್ಕಾರ ಸ್ಪಂದನೆ ಮಾಡಿಲ್ಲ. ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿ ಬಹಳಷ್ಟು ಗಂಭೀರವಾಗಿದೆ. ಪಶ್ಚಿಮಘಟ್ಟದ ನೀರಿಗೂ ಟ್ಯಾಕ್ಸ್ ಹಾಕುವ ಚಿಂತನೆ ನಡೆಸಿದ್ದಾರೆ. ಈ ಸರ್ಕಾರ ದಿವಾಳಿಯಾಗಿದೆ. ಇವರು ನಾಳೆ ಗಾಳಿಗೂ ಟ್ಯಾಕ್ಸ್ ಹಾಕುತ್ತಾರೆ. ಹಿಂದಿನ ಸರ್ಕಾರದ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ಸಿಎಂ ಶೂರತ್ವ ತೋರುತ್ತಿದ್ದಾರೆ ಎಂದು ಟೀಕೆ ಮಾಡಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/12/2024 04:47 pm

Cinque Terre

53.89 K

Cinque Terre

4

ಸಂಬಂಧಿತ ಸುದ್ದಿ