ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಲೇಸರ್ ಶಸ್ತ್ರಚಿಕಿತ್ಸೆಯಲ್ಲಿ ಜೀವಮಾನ ಸಾಧನೆ- ಯುರೋಪಿಯನ್ ಲೇಸರ್ ಮೆಡಿಕಲ್ ಅಸೋಸಿಯೇಶನ್ ನಿಂದ ಪ್ರಶಸ್ತಿ

ಹುಬ್ಬಳ್ಳಿ: ದಂತ ಚಿಕಿತ್ಸೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ಸಾಧಕರು ಹುಬ್ಬಳ್ಳಿಯ ಹೆಮ್ಮೆಯ ವೈದ್ಯರಾದ ಡಾ.ಚಂದ್ರಶೇಖರ ಯಾವಗಲ್. ಹಲವಾರು ಆವಿಷ್ಕಾರದ ಮೂಲಕ ಲೇಸರ್ ದಂತ ಚಿಕಿತ್ಸೆಯಲ್ಲಿ ಜಗದ್ವಿಖ್ಯಾತಿ ಗಳಿಸಿರುವ ಸಾಧಕರಿಗೆ ಈಗ ಮತ್ತೊಂದು ಗೌರವದ ಗರಿ ಒಲಿದು ಬಂದಿದೆ.

ವಾಣಿಜ್ಯನಗರಿ ಹುಬ್ಬಳ್ಳಿಯ ದಂತ ಶಸ್ತ್ರಚಿಕಿತ್ಸಕ ಮತ್ತು ಓರಲ್ ಲೇಸರ್ ತಜ್ಞ ಡಾ.ಚಂದ್ರಶೇಖರ ಯಾವಗಲ್‌ ಅವರನ್ನು ಯುರೋಪಿಯನ್ ಮೆಡಿಕಲ್ ಲೇಸರ್ ಅಸೋಸಿಯೇಷನ್ ವತಿಯಿಂದ ನೀಡಲಾಗುವ 'ಜೀವಮಾನ ಸಾಧನೆ' ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಯುರೋಪಿಯನ್ ಮೆಡಿಕಲ್ ಲೇಸರ್ ಅಸೋಸಿಯೇಶನ್ ಗೌರವ ಪಡೆದಿರುವ ವೈದ್ಯರ ಸಾಧನೆ ನಿಜಕ್ಕೂ ಪ್ರಶಂಸನೀಯವಾಗಿದೆ.

ಇನ್ನೂ ಅಮೆರಿಕದಲ್ಲಿ ನಡೆದ ಗ್ರೇಟರ್ ನ್ಯೂಯಾರ್ಕ್ ಡೆಂಟಲ್ ಮೀಟಿಂಗ್‌ನಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದ್ದು, ತಂಬಾಕು ವ್ಯಸನ ಮುಕ್ತಗೊಳಿಸುವಲ್ಲಿ ಲೇಸರ್ ಅಪ್ಲಿಕೇಶನ್‌ಗಳ ಪಾತ್ರ ಕುರಿತು ಅವರು ಉಪನ್ಯಾಸ ನೀಡಿದ್ದಾರೆ. ಚಂದ್ರಶೇಖರ ಯಾವಗಲ್ ಅವರು ಇಲ್ಲಿನ ಕಲ್ಯಾಣ ನಗರದಲ್ಲಿರುವ ಯಾವಗಲ್ ಲೇಸರ್ ವೇದಾ ಕೇಂದ್ರದ ಮುಖ್ಯಸ್ಥರಾಗಿದ್ದು, ಕಳೆದ ನವೆಂಬರ್ ತಿಂಗಳಲ್ಲಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಿಂದ ಕೊಡ ಮಾಡುವ ವೈದ್ಯರತ್ನ ಪ್ರಶಸ್ತಿ ಪಡೆದಿರುವುದು ವಿಶೇಷವಾಗಿದೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/12/2024 10:26 pm

Cinque Terre

178.34 K

Cinque Terre

1

ಸಂಬಂಧಿತ ಸುದ್ದಿ