ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ; ಚಿಣ್ಣರ ಚಿಲಿಪಿಲಿಯಾದ ಚಿಟಗುಪ್ಪಿ ಆಸ್ಪತ್ರೆ, ಮಕ್ಕಳಿಗೆ ಗೋಡೆಗಳಲ್ಲಿ ಅಕ್ಷರ ಜ್ಞಾನ

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆ ಒಂದಲ್ಲಾ ಒಂದು ರೀತಿಯಲ್ಲಿ ಬದಲಾವಣೆ ಆಗುತ್ತಿದೆ. ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದರ ಜೊತೆಗೆ, ಈಗ ಚಿಕ್ಕ ಮಕ್ಕಳಿಗಾಗಿ ಮತ್ತೊಂದು ಮಹತ್ತರ ಕಾರ್ಯದ ಜೊತೆಗೆ ಮಕ್ಕಳಿಗೆ ಶೈಕ್ಷಣಿಕವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

ಎಸ್,,, ಹೀಗೆ ನೋಡ್ತಾ ಇದ್ರೆ ಇದು ಆಸ್ಪತ್ರೆಗಿಂತ ಯಾವುದೋ ಒಂದು ಸ್ಕೂಲ್‌ಗೆ ಬಂದಂತ ವಾತಾವರಣ ನಿರ್ಮಾಣವಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಈ ಚಿಟಗುಪ್ಪಿ ಆಸ್ಪತ್ರೆ ಮಕ್ಕಳಿಗೆ, ಮಹಿಳೆಯರ ಚಿಕಿತ್ಸೆಗೆ ಫುಲ್ ಫೇಮಸ್. ಚಿಕಿತ್ಸೆಗೆಂದು ಬಂದ ಮಕ್ಕಳು ಒಂದು ಕಡೆ ಸುಮ್ಮನೆ ಕೂರುವುದನ್ನು ನೋಡಿದ ಮುಖ್ಯ ವೈದ್ಯಾಧಿಕಾರಿ ಡಾ.‌ಶ್ರೀಧರ ದಂಡೆಪ್ಪನವರ ಅವರು, ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಲು ಆಸ್ಪತ್ರೆಯ ಗೋಡೆಗಳಿಗೆ ಕಾರ್ಟೂನ್ಸ್, ವರ್ಣಮಾಲೆ ಅಕ್ಷರಗಳು, ವಿವಿಧ ಪ್ರಾಣಿ ಚಿತ್ರಗಳು, ಪರಿಸರ, ಹೀಗೆ ಹಲವಾರು ಬಗೆಯ ಚಿತ್ರಕಲೆಗಳನ್ನು ಗೋಡೆಗಳಲ್ಲಿ ಮೂಡಿಸಿದ್ದಾರೆ. ಅದಷ್ಟೇ ಅಲ್ದೆ ಮಕ್ಕಳಿಗೆ ಆಟ ಆಡಲು ಆಟಿಕೆ ವಸ್ತುಗಳನ್ನು ಕೂಡ ಡಾ.ಶ್ರೀಧರ್ ಅವರು ದಾನಿಗಳಿಂದ ತರಿಸಿಕೊಂಡು ಆಸ್ಪತ್ರೆಗೆ ಒಂದು ಮೆರುಗು ತಂದಿದ್ದಾರೆ. ಆಸ್ಪತ್ರೆಗೆ ಬಂದ ಮಕ್ಕಳು ಅಕ್ಷರಗಳನ್ನು ಓದುತ್ತಾ, ಚಿಕ್ಕ ಚಿಕ್ಕ ವಾಹನಗಳಲ್ಲಿ ಆಟ ಆಡ್ತಿದ್ದನ್ನು ನೋಡಿದ್ರೆ ಸಂತೋಷವಾಗುತ್ತದೆ.

ಇನ್ನು ಸ್ಮಾರ್ಟ್ ಸಿಟಿ ಅಡಿಯಲ್ಲಿ ಚಿಟಗುಪ್ಪಿ ಮಲ್ಟಿಪಲ್ ಆಸ್ಪತ್ರೆ ನಿರ್ಮಾಣವಾಗಿದ್ದು, ಇಲ್ಲಿ ಬಡವರು ಅತಿ ಹೆಚ್ಚು ಬರುತ್ತಾರೆ. ಡಾ. ಶ್ರೀಧರ್ ದಂಡೆಪ್ಪನವರ ಅದೆಷ್ಟೋ ಕ್ರಿಟಿಕಲ್ ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ ಮಹಿಳೆಯರ ಜೀವ ಉಳಿಸಿದ್ದಾರೆ. ಈ ಆಸ್ಪತ್ರೆಗೆ ಅತೀ ಬಡವರೇ ಬರುವುದು. ಕಿಮ್ಸ್ ಆಸ್ಪತ್ರೆ ಬಿಟ್ಟರೆ ಚಿಟಗುಪ್ಪಿ ಎರಡನೇ ದೊಡ್ಡ ಆಸ್ಪತ್ರೆಯಾಗಿದೆ. ಇಲ್ಲಿನ ವೈದ್ಯರು ಸಾಕಷ್ಟು ಗುಣಮಟ್ಟದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈಗ ಮಕ್ಕಳಿಗಾಗಿ ಗೋಡೆಗಳಲ್ಲಿ ಶೈಕ್ಷಣಿಕವಾಗಿ ಜಾಗೃತಿ ಮೂಡಿಸುತ್ತಿರುವುದಕ್ಕೆ, ಡಾ. ಶ್ರೀಧರ ದಂಡೆಪ್ಪನವರ ಅವರ ಈ ಒಂದು ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Somashekar
Kshetra Samachara

Kshetra Samachara

20/12/2024 12:52 pm

Cinque Terre

10.23 K

Cinque Terre

0

ಸಂಬಂಧಿತ ಸುದ್ದಿ