ಹುಬ್ಬಳ್ಳಿ : ಕರ್ನಾಟಕದ ನಂ1 Aviation hospitality institute ಆಗಿರುವ ವಿಷನ್ ಫ್ಲೈ ಸಂಸ್ಥೆ ಒಳ್ಳೆಯ ಶಿಕ್ಷಣ ನೀಡುವುದರ ಜೊತೆಗೆ ಸಾಮಾಜಿಕ ಜಾಗೃತಿ ಕಾರ್ಯಕ್ರಮದಲ್ಲಿಯೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ.
ಹೌದು... ವಿಷನ್ ಫ್ಲೈ ಹಾಗೂ ರೋಟರಿ ರಕ್ತ ಭಂಡಾರ ಧಾರವಾಡ ಸಹಯೋಗದಲ್ಲಿ ರಕ್ತದಾನ ಶಿಬಿರ ಇಂದು ಏರ್ಪಡಿಸಲಾಗಿತ್ತು.
ಈ ರಕ್ತದಾನ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿ ಯಶಸ್ವಿಗೊಳಿಸಿದರು. ಇಲ್ಲಿ ಹಲವಾರು ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ರಕ್ತದಾನ ಮಾಡಿ ಸಂತಸ ವ್ಯಕ್ತಪಡಿಸಿದರು.
ಈ ರಕ್ತದಾನ ಶಿಬಿರದಲ್ಲಿ ಹಲವಾರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ರಕ್ತದಾನದ ಅರಿವು ಮೂಡಿಸಿ ಪ್ರೋತ್ಸಾಹ ನೀಡಿದವರು ವಿಷನ್ ಫ್ಲೈ ಸಂಸ್ಥೆಯ ಮುಖ್ಯಸ್ಥರಾದ ದಿನೇಶ ಶಾನಭಾಗ ಅವರು. ಅಂತೆಯೇ ನಮ್ಮ ಪಬ್ಲಿಕ್ ನೆಕ್ಸ್ಟ್ ವಾಹನ ಚಾಲಕರಾದ ಪ್ರಶಾಂತ್ ಹೂಗಾರ್ ಕೂಡಾ ಪ್ರಥಮ ಬಾರಿಗೆ ರಕ್ತದಾನ ಮಾಡಿ ಖುಷಿ ಪಟ್ಟರು.
"ರಕ್ತದಾನ ಮಹಾದಾನ" ಈ ಬಗ್ಗೆ ಅರಿವು ಮೂಡಿಸಿ. ನೀವೂ ರಕ್ತದಾನ ಮಾಡಿ, ಇನ್ನೊಬ್ಬರಿಗೆ ರಕ್ತದಾನ ಮಾಡಲು ಪ್ರೇರೇಪಿಸಿ. ರಕ್ತದಾನ ಮಾಡಿ ಜೀವ ಉಳಿಸಿ ಎನ್ನುವ ಸಂದೇಶ ಸಾರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/12/2024 10:12 pm