ಹುಬ್ಬಳ್ಳಿ: ಬ್ರಾಂಡೆಡ್ ಬೆಡ್‌ಗಳು ಬೆಸ್ಟ್ ಸ್ಲೀಪಿಂಗ್ ಫೀಲ್ ನೀಡುವುದು ನಿಜ. ಆದರೆ ಈಗ ಅದೇ ಬೆಡ್‌ಗಳು ರಸ್ತೆಯ ಮೇಲೆ ಬಿದ್ದಿರುವುದರಿಂದ ಜನರು ಆತಂಕಗೊಂಡಿದ್ದಾರೆ.
ಜನರು ಬದುಕಿದ್ದಾಗ ನನಗೆ ಬೇಕು ನಿನಗೆ ಬೇಕು ಅಂತ ಬ್ರ್ಯಾಂಡೆಡ್ ಬೆಡ್ ಖರೀದಿಸುತ್ತಾರೆ. ಆದರೆ ಸತ್ತಮೇಲೆ ಬೆಡ್‌ಗಳು ರಸ್ತೆಗೆ ಬಂದು ಬೀಳುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಎಸೆದಿರುವ ಬೆಡ್‌ಗಳಿಂದ ಜನರು ಭಯಬೀತರಾಗಿದ್ದಾರೆ. ಅದರಲ್ಲೂ ಜನರಲ್ಲಿ ರಾತ್ರಿ ವೇಳೆ ಸಂಚಾರ ಮಾಡುವುದಕ್ಕೂ ಕೂಡ ಹೆದರುವಂತಾಗಿದೆ.
ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಅವರು ಬಳಸುತ್ತಿದ್ದ ಬೆಡ್‌ಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೇ ರಸ್ತೆಯಲ್ಲಿಯೇ ಎಸೆದು ಹೋಗುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಂತಿನಗರದ ಚರ್ಚ್ ಮೂಲಕ ಕುಸುಗಲ್ ಹೋಗುವ ರಸ್ತೆಯಲ್ಲಿಯೇ ಸುಮಾರು 20-30 ಬೆಡ್‌ಗಳು ಬಿದ್ದಿರುವುದರಿಂದ ಜನರ ಭಯಭೀತರಾಗಿದ್ದಾರೆ.
ಹೀಗೆ ಎಲ್ಲೆಂದರಲ್ಲಿ ಎಸೆಯುವ ಬದಲು ವ್ಯವಸ್ಥಿತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದರೇ ಜನರ ಆತಂಕವೂ ದೂರವಾಗುತ್ತದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಸಾರ್ವಜನಿಕರು ಕೂಡಲೇ ಭಯ ಹುಟ್ಟಿಸಿದ ಬೆಡ್‌ಗಳನ್ನು ಸ್ಥಳಾಂತರ ಮಾಡಲು ಆಗ್ರಹಿಸಿದ್ದಾರೆ.
Kshetra Samachara
18/12/2024 07:42 pm