ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲ್ಲಾಪುರ ಪಟ್ಟಣದಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯ ರಕ್ಷಣೆ: ಪುನೀತ್ ರಾಜಕುಮಾರ್  ಆಶ್ರಮದಲ್ಲಿ ಆಶ್ರಯ 

ಸಿದ್ದಾಪುರ :  ಯಲ್ಲಾಪುರ ಪಟ್ಟಣದಲ್ಲಿ ಅನಾಥ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿ ಸಿದ್ದಾಪುರದ ಮುಗದುರ್ ನಲ್ಲಿರುವ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ಆಶ್ರಯ ನೀಡಿದ್ದು ಈತನ ಗುರುತು ಪರಿಚಯ ಇರುವವರು ಆಶ್ರಮದವರಿಗೆ ಅಥವಾ ಸ್ಥಳೀಯ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಆಶ್ರಮದ ಮುಖ್ಯಸ್ಥ ನಾಗರಾಜ  ನಾಯ್ಕ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲ್ಲಾಪುರ ಪಟ್ಟಣದಲ್ಲಿ ಕಳೆದ ಕೆಲ ದಿನಗಳಿಂದ  ಅನಾಥ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಇರುವ ಬಗ್ಗೆ ಯಲ್ಲಾಪುರ ಠಾಣೆಯ ಪೋಲೀಸರಿಗೆ  ಸಾರ್ವಜನಿಕರು ಮಾಹಿತಿ ನೀಡಿದ್ದು ಅನಾಥ  ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಗಮನಿಸಿದ ಯಲ್ಲಾಪುರ  ಠಾಣೆಯ ಪೊಲೀಸರು ಆಶ್ರಮದವರಿಗೆ ಕರೆ ಮಾಡಿದ ಹಿನ್ನೆಲೆ ಆಶ್ರಮದವರು ಭೇಟಿ ನೀಡಿ ಆತನನ್ನು ಆಶ್ರಮಕ್ಕೆ ಕರೆತಂದು ಆಶ್ರಯ ನೀಡಿ ಆರೈಕೆ ಮಾಡುತ್ತಿದ್ದಾರೆ, ಈತನು ಕೇವಲ ಪಂಜಾಬ್ ಎಂದಷ್ಟೇ ಹೇಳುತ್ತಿದ್ದು  ಈತನ ಗುರುತು ಪರಿಚಯ ಇದ್ದವರು ಆಶ್ರಮದವರಿಗೆ ಅಥವಾ ಸಿದ್ದಾಪುರ ಪೊಲೀಸರನ್ನ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

Edited By : PublicNext Desk
Kshetra Samachara

Kshetra Samachara

12/12/2024 10:38 am

Cinque Terre

640

Cinque Terre

0

ಸಂಬಂಧಿತ ಸುದ್ದಿ