ಹಳಿಯಾಳ : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಮಾಡುವುದಾಗಿ ತಿಳಿಸಿದೆ. ಅಲ್ಲದೇ ಇಂದು ಸರ್ಕಾರಿ ಕಚೇರಿಗಳಿಗೆ ಸರ್ಕಾರಿ ರಜೆ ಘೋಷಿಸಿದ್ದರೂ ಕೂಡ ಹಳಿಯಾಳದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಹಳಿಯಾಳದ ಕಚೇರಿಯವರು ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ ಘಟನೆ ನಡೆದಿದೆ.
ಶೋಕಾಚರಣೆ ಹಿನ್ನೆಲೆ ಸರ್ಕಾರ ರಜೆ ಘೋಷಿಸಿದ್ದರೂ ಕಚೇರಿ ಬಾಗಿಲನ್ನು ತೆರೆದು ಸಿಬ್ಬಂದಿ ಪ್ರತಿ ದಿನದಂತೆ ಕರ್ತವ್ಯದಲ್ಲಿ ತೊಡಗಿದ್ದಾರೆ. ಈ ಕುರಿತು ಇಲಾಖೆಯ ಪ್ರಭಾರಿ ಅಧಿಕಾರಿ ಸತೀಶ್ ಅವರನ್ನು ವಿಚಾರಿಸಿದಾಗ, ಅವರು ಕೆಲವು ಫೈಲ್ ಗಳನ್ನು ಹುಡುಕುವುದಿದೆ, ಕೆಲಸವಿದೆ ಎಂದಿದ್ದಾರೆ.
PublicNext
11/12/2024 07:14 pm