ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರದಲ್ಲಿ ಬೀದಿ ನಾಟಕ ತಂಡದ ಕಲಾವಿದರಿಗೆ 2024ರ ಜಿಲ್ಲಾ ಮಟ್ಟದ  ಬೀದಿ ರಂಗ ಪುರಸ್ಕಾರ

ಸಿದ್ದಾಪುರ : ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟ ಬೆಂಗಳೂರು (ರಿ), ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಬೀದಿ ನಾಟಕೋತ್ಸವ ಮತ್ತು ಜಿಲ್ಲಾ ಮಟ್ಟದ ಬೀದಿ ರಂಗ ಪುರಸ್ಕಾರ 2024, ಜಾನಪದ ಸಂಗೀತ ಮತ್ತು ನಾಟಕ ಕಾರ್ಯಕ್ರಮ ಸಿದ್ದಾಪುರದ ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆಯಿತು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ ಜಿ ನಾಗರಾಜ ಕಾರ್ಯಕ್ರಮ ಉದ್ಘಾಟಿಸಿ ಬೀದಿ ನಾಟಕದಲ್ಲಿ ಕೀಳರಿಮೆ ಇರಬಾರದು ಅಕ್ಷರ ಪರಿಜ್ಞಾನ ಕೊಡುವಲ್ಲಿ ಬೀದಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ, ಸರಕಾರದ ಕಾರ್ಯಕ್ರಮ ಜನರಿಗೆ ಮುಟ್ಟಿಸುವುದು, ಶೋಷಣೆಗೆ ಒಳಗಾದವರ ಹಕ್ಕುಗಳನ್ನು ಪ್ರತಿಪಾದಿಸಿ ಸರಕಾರ ಕ್ಕೆ ಮುಟ್ಟಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ, ಒಳ್ಳೆಯ ಸಮಾಜದ ನಿರ್ಮಾಣಕ್ಕೆ ಭಾಷೆಗಳನ್ನು ಮೆಟ್ಟಿನಿಂತು ಸಮಾಜ ಕ್ಕೆ ತಿಳುವಳಿಕೆ ನೀಡುತ್ತವೆ ಎಂದರು.

ಬೇಡ್ಕಣಿ ಕೋಟೆ ಹನುಮಂತ ದೇವಸ್ಥಾನ ಸಮಿತಿ ಅಧ್ಯಕ್ಷ ವಿ ಎನ್ ನಾಯ್ಕ,ಸಾಮಾಜಿಕ ಹೋರಾಟಗಾರ ವಸಂತ ನಾಯ್ಕ್, ಮಾತನಾಡಿದರು ಇ ಒ ದೇವರಾಜ ಹಿತ್ಲಕೊಪ್ಪ, ರಾಜ್ಯ ಬೀದಿ ನಾಟಕ ಕಲಾ ತಂಡದ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಕೃಷ್ಣ ಮುದ್ಗೇಕರ್, ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ಸಿ ಆರ್ ನಾಯ್ಕ ರೈತ ಮುಖಂಡ ವೀರಭದ್ರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/12/2024 03:50 pm

Cinque Terre

1.68 K

Cinque Terre

0