ಸಿದ್ದಾಪುರ : ನಾಡದೇವಿ ಜನಪರ ವೇದಿಕೆ ಸಿದ್ದಾಪುರ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಸಿದ್ದಾಪುರ (ಬೇಡ್ಕಣಿ ) ಇವರ ಆಶ್ರಯ ದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವಿಜೃಂಭಣೆಯಿಂದ ನಡೆಯಿತು.
ಸಾಮಾಜಿಕ ಮುಖಂಡ ವಸಂತ ನಾಯ್ಕ ಮನ್ಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಮೊಬೈಲ್ ಬಳಕೆ ಕಡಿಮೆ ಮಾಡಿ ಗುರು ಹಿರಿಯರಿಗೆ ತಂದೆ ತಾಯಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಿ, ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಿ ನಾಡು ನುಡಿ ಜಲ ವಿಚಾರ ಬಂದಾಗ ಒಗ್ಗಟ್ಟಿನಿಂದ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದರು.
ಮುಖ್ಯ ಅತಿಥಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿ ಎನ್ ನಾಯ್ಕ್ ಮಾತನಾಡಿ ವಿದ್ಯಾರ್ಥಿಗಳಾದ ನೀವು ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆಗಳನ್ನು ತೋರಿಸಬೇಕು ಆ ಮೂಲಕ ಮುಂದಿನ ಜೀವನಕ್ಕೆ ಬೇಕಾದ ಅಡಿಪಾಯವನ್ನು ಹಾಕಿಕೊಳ್ಳಲು ಸಾಧ್ಯ, ಈಗಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯವಿದೆ ಅದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ರೈತ ಮುಖಂಡ ವೀರಭದ್ರ ನಾಯ್ಕ್, ನಾಡದೇವಿ ಜನಪರ ವೇದಿಕೆ ಅಧ್ಯಕ್ಷ ಅನಿಲ್ ಕೊಠಾರಿ, ಬಿ ಎಸ್ ಏನ್ ಡಿ ಪಿ ರಾಜ್ಯಾಧ್ಯಕ್ಷೆ ದೀಪಾ ನಾಯ್ಕ್, ತಾಲೂಕ ಅಧ್ಯಕ್ಷ ವಿನಾಯಕ ದೊಡ್ಡಗದ್ದೆ, ಕಾಲೇಜು ಪ್ರಾಂಶುಪಾಲ ಡಾ. ಸತೀಶ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಕನ್ನಡ ಸ್ಪಷ್ಟ ಭಾಷಣ ಹಾಗೂ ಕನ್ನಡ ಉಳಿವಿಗಾಗಿ ವಿಷಯದ ಕುರಿತ ಚರ್ಚೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪತ್ರಕರ್ತ ಕನ್ನೇಶ್ ಕೋಲ್ ಸಿರ್ಸಿ, ನಿವೃತ್ತ ಯೋಧ ಗೋವಿಂದ ಹರ್ಗಿ, ಬಾಲ ಯಕ್ಷಗಾನ ಪ್ರತಿಭೆ ಕು. ಪ್ರಣೀತಾ ಎಂ. ನಾಯ್ಕ ರವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ದಿವಾಕರ್ ಸಂಪಖಂಡ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಕು. ಮೇಘನಾ ನಿರ್ವಹಿಸಿದರು, ಪತ್ರಕರ್ತ ಯಶವಂತ ತ್ಯಾರ್ಸಿ ವಂದಿಸಿದರು.
Kshetra Samachara
06/12/2024 04:16 pm