ಸಿದ್ದಾಪುರ : ಹೊನ್ನಾವರ ತಾಲೂಕಿನ ಚಿಕ್ಕನಗೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಗಾರ್ ಗ್ರಾಮದ ಅರಣ್ಯವಾಸಿ ರಾಜು ತಿಪ್ಪಯ್ಯ ನಾಯ್ಕ್ ಅವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಸಿದ್ದಾಪುರ ಅರಣ್ಯ ಅತಿಕ್ರಮಣದಾರ ವೇದಿಕೆಯವರು ಖಂಡಿಸಿ ಸಿದ್ದಾಪುರದ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ದೌರ್ಜನ್ಯ ಎಸಗಿದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ರೀತಿ ಕಾನೂನು ಕ್ರಮ ಜರುಗಿಸುವಂತೆ ಅತಿಕ್ರಮಣದಾರರು ಒತ್ತಾಯ ಮಾಡಿದರು.
ಮಾಬ್ಲೆಶ್ವರ ನಾಯ್ಕ ನೇತೃತ್ವದಲ್ಲಿ ಸಿದ್ದಾಪುರ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ರೈತ ಮುಖಂಡ ವೀರಭದ್ರ ನಾಯ್ಕ ಮಾತನಾಡಿ ಅರಣ್ಯ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳು ತೊಂದರೆ ಕೊಡಬಾರದು ಎನ್ನುವ ಕಾನೂನು ಇದ್ದರೂ ಅಧಿಕಾರಿಗಳು ಉಲ್ಲಂಘಿಸಿ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಇವರ ಮೇಲೆ ಸೂಕ್ತ ಕ್ರಮವಾಗಬೇಕು ಎಂದು ಆಗ್ರಹಿಸಿದರು.
ಅರಣ್ಯ ಅತಿಕ್ರಮಣದಾರ ವೇದಿಕೆಯ ಪ್ರಮುಖ ಮಹಾಬಲೇಶ್ವರ ನಾಯ್ಕ್ ಬೇಡ್ಕಣಿ ಮಾತನಾಡಿ ಹೊನ್ನಾವರದಲ್ಲಿ ನಡೆದ ಘಟನೆಯನ್ನು ಜಿಲ್ಲಾ ಅರಣ್ಯ ಅತಿಕ್ರಮಣದಾರರು ಬಲವಾಗಿ ಖಂಡಿಸುತ್ತಿದೆವೆ ದೌರ್ಜನ್ಯ ಎಸಗಿದ 40 ಜನ ಸಿಬ್ಬಂದಿಯ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಮನವಿ ನೀಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಅರಣ್ಯ ಅತಿಕ್ರಮಣದಾರ ವೇದಿಕೆ ಸದಸ್ಯರು ಉಪಸ್ಥಿತರಿದ್ದರು..
Kshetra Samachara
11/12/2024 04:07 pm