ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಅಕ್ರಮ ಗೋ ಸಾಗಾಟ - ಹಿಂದೂ ಪರ ಕಾರ್ಯಕರ್ತರಿಂದ ರಕ್ಷಣೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗೋಕಳ್ಳತನ ದಿನೇ ದಿನೇ ಹೆಚ್ಚಾಗುತ್ತಿದೆ. ಪೊಲೀಸರ ಕಣ್ಣು ತಪ್ಪಿಸಲು ಗೋಕಳ್ಳರು ನಾನಾ ರೀತಿಯ ತಂತ್ರ ಹೆಣೆಯುತ್ತಿದ್ದಾರೆ. ಗ್ರಾಮಸ್ಥರು ಹಾಗೂ ಹಿಂದೂಪರ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಮೂರು ಗೋವುಗಳನ್ನು ರಕ್ಷಿಸಿರುವ ಘಟನೆಯೊಂದು ಕೊಪ್ಪ ತಾಲ್ಲೂಕಿನ ತಲಮಕ್ಕಿ ಗ್ರಾಮದಲ್ಲಿ ನಡೆದಿದೆ.

ಕೊಪ್ಪದಿಂದ ಕುದರೆಗುಂಡಿ ಹೋಗುವ ತಲಮಕ್ಕಿ ಗ್ರಾಮದಲ್ಲಿ ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಅಕ್ರಮವಾಗಿ ಮೂರು ಗೋವುಗಳನ್ನು ಸಾಗಿಸಲಾಗುತ್ತಿದ್ದು, ಗ್ರಾಮಸ್ಥರು ಅನುಮಾನಗೊಂಡು ವಾಹನವನ್ನು ಅಡ್ಡಗಟ್ಟಿ ಪರಿಶೀಲಿಸಿದ್ದಾರೆ. ಗೋಸಾಗಾಟ ಮಾಡುತ್ತಿರುವುದು ಧೃಡಪಟ್ಟಿದೆ. ಅಷ್ಟರೊಳಗಾಗಿ ವಾಹನದ ಚಾಲಕ ಕೂಡ ಎಸ್ಕೇಪ್‌ ಆಗಿದ್ದಾನೆ. ದಿನ ಬೆಳಗಾದರೆ ಗೋಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಮಾಂಸಕ್ಕಾಗಿ ವಧೆ ಮಾಡುವ ಉದ್ದೇಶದಿಂದ ಐಷಾರಾಮಿ ವಾಹನಗಳಲ್ಲಿ ಗೋವುಗಳನ್ನು ಹಿಂಸಾತ್ಮಕವಾಗಿ ತುಂಬಿ ಸಾಗಿಸಲಾಗುತ್ತಿದೆ. ಅಕ್ರಮ ಗೋ ಸಾಗಾಟ ಮತ್ತು ಕಳ್ಳತನಕ್ಕೆ ತಾರ್ಕಿಕ ಅಂತ್ಯವನ್ನು ಪೊಲೀಸ್ ಇಲಾಖೆಯೇ ಒದಗಿಸಬೇಕಾಗಿದೆ.

Edited By : Vinayak Patil
PublicNext

PublicNext

10/12/2024 12:45 pm

Cinque Terre

27.16 K

Cinque Terre

0

ಸಂಬಂಧಿತ ಸುದ್ದಿ