ಚಿಕ್ಕಮಗಳೂರು: ಶವ ಸಂಸ್ಕಾರ ಮಾಡುವ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಹೈ ಡ್ರಾಮಾ ನಡೆದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ. ಜಾಗದ ವಿಚಾರ ನ್ಯಾಯಾಲಯದಲ್ಲಿರುವಾಗಲೇ ಶವ ಸಂಸ್ಕಾರದ ವಿಚಾರವಾಗಿ ದಲಿತರು ಹಾಗೂ ಒಕ್ಕಲಿಗರ ನಡುವೆ ಕಿರಿಕ್ ನಡೆದಿದೆ. ಆಲ್ದೂರಿನ ದಲಿತ ಸಮುದಾಯದ ರಾಮಮ್ಮ (70) ಎಂಬ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮಹಿಳೆಯ ಅಂತ್ಯ ಸಂಸ್ಕಾರವನ್ನು ಒಕ್ಕಲಿಗರು ತಮ್ಮ ಸಮುದಾಯದ ನಿವೇಶನ ಎಂದು ಬೋರ್ಡ್ ಹಾಕಿಕೊಂಡಿದ್ದ ಜಾಗದಲ್ಲಿ ದಲಿತರು ಮೃತ ಮಹಿಳೆಯ ಶವ ಸಂಸ್ಕಾರ ಮಾಡಲು ಮುಂದಾಗಿದ್ದರು.
ಈ ವೇಳೆ ಅಂತ್ಯ ಸಂಸ್ಕಾರ ಮಾಡದಂತೆ ಗುಂಡಿಯೊಳಗೆ ಇಳಿದು ಆಲ್ದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೂರ್ಣಿಮಾ ಶ್ರೀನಿವಾಸ್ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕೋಪಿತ ಗೊಂಡ ದಲಿತ ಸಮುದಾಯದ ಮಹಿಳೆಯರು ಅವರು ಗುಂಡಿಯೊಳಗಿಂದ ಎಳೆದು ಹಾಕಿ ಶವಸಂಸ್ಕಾರ ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣವಾಗಿದ್ದು ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ತಹಶೀಲ್ದಾರ್ ಸುಮಂತ್ ಭೇಟಿ ನೀಡಿದ್ದು ಸದ್ಯ ಆಲ್ದೂರಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
PublicNext
06/12/2024 06:37 pm