ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ತನ್ನ ಪತ್ನಿಯನ್ನೇ ಗೃಹ ಬಂಧನದಲ್ಲಿಟ್ಟು ಮಾನಸಿಕ ಹಿಂಸೆ ನೀಡಿದ ವೈದ್ಯ

ಚಿಕ್ಕಮಗಳೂರು : 20 ರೂಪಾಯಿಯಲ್ಲಿ ಆಕೆ ವಾರಪೂರ್ತಿ ಬದುಕಬೇಕು. ಅದು ಮನೆಯಿಂದ ಹೊರಬರದಂತೆ. ಮನೆಯಲ್ಲಿ ರೇಷನ್ ಇದ್ರೆ ಅನ್ನ-ಆಹಾರ, ಇಲ್ಲದಿದ್ರೆ 3-4 ದಿನ ನೀರು ಕುಡಿದುಕೊಂಡೇ ಇರಬೇಕು. ಮನೆಯ ಕೆಲಸವೆಲ್ಲಾ ಮಾಡಬೇಕು. ಅಡುಗೆ-ಊಟ ಮಾಡುವಂತಿಲ್ಲ. ಒಂದೇ ಚೇರ್ ಅಲ್ಲೇ ಕೂರಬೇಕು. ಮಹಡಿ ಮೇಲೆ ಮಲಗಬೇಕು. ಇದು ಅವಿದ್ಯಾವಂತರ ಕಥೆಯಲ್ಲ. ವೈದ್ಯನೋರ್ವ ತನ್ನ ಪತ್ನಿಗೆ 4 ವರ್ಷದಿಂದ ಮಾಡಿರೋ ಉಪಚಾರ.

ಆಸ್ಪತ್ರೆ ಬೆಡ್ ಮೇಲೆ ಕಣ್ಣೀರಿಡ್ತಿರೋ ಈಕೆಯ ಹೆಸ್ರು ವಿನುತಾ ರಾಣಿ. ಚಿಕ್ಕಮಗಳೂರು ನಗರದ ದೋಣಿಕಣ ನಿವಾಸಿ. 22 ವರ್ಷದ ಹಿಂದೆ ಡಾ.ರವಿಕುಮಾರ್ ಜೊತೆ ಮದುವೆ ಮಾಡಿಕೊಟ್ಟಿದ್ರು. ಎಂ.ಬಿ.ಬಿ.ಎಸ್. ಓದುತ್ತಿರೋ ಮಗನೂ ಇದ್ದಾನೆ. ಆದ್ರೆ, ನಾಲ್ಕು ವರ್ಷದಿಂದ ಪತ್ನಿಗೆ ಮಾನಸಿಕ ಕಿರುಕುಳ ನೀಡ್ತಿರೋ ಪತಿ ಈಕೆಯನ್ನು ಗೃಹಬಂಧದಲ್ಲಿಟ್ಟಿದ್ದಾರೆ. ಮನೆಯ ಮೇಲಿನ ಮಹಡಿಯ ರೂಮಿನಲ್ಲೇ ಇರಬೇಕು. ಕೇಳಬರುವಂತಿಲ್ಲ. ಬಂದರೂ ಮನೆ ಕೆಲಸ ಮಾಡಿ ಮತ್ತೆ ಮೇಲೆ ಹೋಗಬೇಕು. ಕೂರೋಕೆ ಒಂದು ಚೇರ್ ಕೊಟ್ಟಿದ್ದಾರೆ ಅಷ್ಟೆ.

ಊಟ ಅವರು ಹಾಕಿದಾಗ, ಹಾಕಿದಷ್ಟು ಅಷ್ಟೆ. ಗಂಡ ಹಾಗೂ ಅತ್ತೆ ಊರಿಗೆ ಹೋದರೆ ಈಕೆಗೆ ಅವರು ಬರುವಷ್ಟು ದಿನ ಗೃಹ ದಿಗ್ಭಂದನ. ಮನೆಯಿಂದ ಆಚೆ ಬರುವಂತಿಲ್ಲ.

ಮನೆಯಲ್ಲೇ ದಿಗ್ಭಂದನ ಹಾಕಿರೋ ಡಾಕ್ಟ್ರು ಈಕೆಗೆ ದಿನಕ್ಕೆ ಒಂದು ಅಥವ ಎರಡು ಹೊತ್ತು ಊಟ ಕೊಡ್ತಾರೆ. ಅದು ಅವರು ಕೊಟ್ಟಷ್ಟು ಮಾತ್ರ ತಿನ್ನಬೇಕು. ಜಾಸ್ತಿ ಕೇಳಿದರೆ ಹೊಡೆಯೋದು, ತಲೆಯನ್ನ ಗೋಡೆಗೆ ಗುದ್ದೋದು, ಎದೆಗೆ ಕಾಲಲ್ಲಿ ಓದೆಯೋದು ಮಾಡ್ತಾರಂತೆ.

ಕುತ್ತಿಗೆ ಹಿಸುಕಿ ಸಾಯಿ-ಸಾಯಿ ಎಂದು ಡಾಕ್ಟ್ರು ಹಾಗೂ ಆತನ ಅಮ್ಮ ಹೊಡೆಯುತ್ತಾರಂತೆ. ಊಟದಲ್ಲಿ ಸ್ಲೋ ಪಾಯಿಜನ್ ಹಾಕಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ ಎಂದು ವಿನೂತರಾಣಿ ಸಹೋದರ ವಾಗೀಶ್ ಆರೋಪಿಸಿದ್ದಾರೆ. ಎಂ.ಬಿ.ಬಿ.ಎಸ್. ಓದುತ್ತಿರೋ ಮಗನಿದ್ದು ಆತನಿಗೂ ತಾಯಿಯ ಬಳಿ ಬಿಡೋದಿಲ್ಲ. ಆತ ಕೂಡ ಅಮ್ಮನಿಗೆ ನೀನು ಇನ್ನೂ ಸತ್ತಿಲ್ವಾ, ಯಾವಾಗ ಸಾಯ್ತೀಯಾ. ಅಪ್ಪ ನನಗೆ ಓದಿಸುತ್ತೆ ಅಪ್ಪ ಹೇಳಿದ ಹಾಗೆ ಮಾಡು. ಅಪ್ಪ ಕೊಡೋ ಊಟ ತಿನ್ನು ಅಂತಾನಂತೆ.

ಒಟ್ಟಾರೆ, ಸಪ್ತಪದಿ ತುಳಿದು ವರ್ಷಗಟ್ಟಲೇ ಸಂಸಾರ ಮಾಡಿದ ವೈದ್ಯ ನಾಲ್ಕೇ ವರ್ಷಕ್ಕೆ ಸಾವಿನ ನರಕ ತೋರಿಸಿದ್ದು. ಇದ್ದೊಬ್ಬ ಮಗನೂ ಕೂಡ ಅಮ್ಮನ ಸಾವು ಬಯಸುತ್ತಿದ್ದಾನೆ ನಿಜಕ್ಕೂ ದುರಂತವೇ ಸರಿ

ಡ್ಯಾನಿ, ಪಬ್ಲಿಕ್ ನೆಕ್ಸ್ಟ್, ಚಿಕ್ಕಮಗಳೂರು

Edited By : Ashok M
PublicNext

PublicNext

12/12/2024 11:34 am

Cinque Terre

13.27 K

Cinque Terre

7

ಸಂಬಂಧಿತ ಸುದ್ದಿ