ಚಿಕ್ಕಮಗಳೂರು: ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ದತ್ತಾ ಜಯಂತಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸನ್ನದ್ದವಾಗಿದೆ. ಭದ್ರತೆಗೆ 4 ಸಾವಿರ ಪೊಲೀಸರನ್ನು ನಿಯೋಜಿಸಿರುವುದರಿಂದ ಪೊಲೀಸರು, ತುಕಡಿಗಳು ಚಿಕ್ಕಮಗಳೂರಿನಲ್ಲಿ ಫುಲ್ ಅಲರ್ಟ್ ಆಗಿವೆ. ದತ್ತ ಜಯಂತಿ ಹಿನ್ನೆಲೆ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ದೃಷ್ಟಿಯಲ್ಲಿ ಪೊಲೀಸರು ನಗರದಲ್ಲಿ ರೂಟ್ ಮಾರ್ಚ್ ನಡೆಸಿದರು.
ರಾಮನಹಳ್ಳಿಯ ಪೊಲೀಸ್ ಸಶಸ್ತ್ರ ಕವಾಯತು ಮೈದಾನದಿಂದ ಆರಂಭಗೊಂಡ ರೂಟ್ ಮಾರ್ಚ್ ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ ರಸ್ತೆಯ ಆಜಾದ್ ಪಾರ್ಕ್ ವರೆಗೆ ಸಾಗಿತು. ರೂಟ್ ಮಾರ್ಚ್ ನಲ್ಲಿ ಕೆಎಸ್ಆರ್‌ಪಿ, ಕ್ಯೂಆರ್ ಟಿ, ಡಿಎಆರ್ ತುಕಡಿಗಳು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದೋಬಸ್ತ್ ಕರ್ತವ್ಯಕ್ಕೆ ಆಗಮಿಸಿರುವ ಪೊಲೀಸರು ಸೇರಿದಂತೆ ಅಧಿಕಾರಿ, ಸಿಬ್ಬಂದಿರವರು ಭಾಗವಹಿಸಿದ್ದರು.
Kshetra Samachara
11/12/2024 07:23 pm