ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ದತ್ತ ಜಯಂತಿ ವೇಳೆ ದುಷ್ಕೃತ್ಯ ಎಸಗಲು ಸಂಚು ಇಲಾಖೆ ಎಚ್ಚೆತ್ತುಕೊಳ್ಳಬೇಕು - ಶರಣ್ ಪಂಪ್ವೆಲ್

ಚಿಕ್ಕಮಗಳೂರು: ನಮ್ಮ ಜನರಿಗೆ ರಾಮ ಮಂದಿರದ ಹೋರಾಟದ ಕಥೆಗಳು ಹೇಗೆ ಗೊತ್ತಿತ್ತೊ . ಈಗ, ಅದೇ ರೀತಿ ಹಿಂದೂಗಳು ದತ್ತಪೀಠದ ಹೋರಾಟದ ಬಗ್ಗೆ ಹಳ್ಳಿ- ಹಳ್ಳಿಯಲ್ಲಿ ತಿಳಿದುಕೊಂಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷದ್ ದಕ್ಷಿಣ ಕರ್ನಾಟಕದ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ. ಈ ಬಾರಿ 25ನೇ ವರ್ಷದ ರಜತ ಮಹೋತ್ಸವದ ದತ್ತಜಯಂತಿ ಅಂಗವಾಗಿ ರಾಜ್ಯಾದ್ಯಂತ ಸಂಕೀರ್ತನಾ ಯಾತ್ರೆ ಮಾಡಿದ್ದೇವೆ.

14ನೇ ತಾರೀಖು ರಾಜ್ಯದ ನಾನಾ ಭಾಗಗಳಿಂದ 25 ಸಾವಿರಕ್ಕೂ ಅಧಿಕ ದತ್ತ ಭಕ್ತರು ಆಗಮಿಸಲಿದ್ದಾರೆ. ಅಂದು ಶೋಭಾಯಾತ್ರೆಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು. ಮಂಡ್ಯ ನಾಗಮಂಗಲ, ದಾವಣಗೆರೆ, ಮಂಗಳೂರಿನ ಹಲವೆಡೆ ಗಣಪತಿ ಮೆರವಣಿಗೆ ವೇಳೆ ಅಹಿತಕರ ಘಟನೆಗಳು ನಡೆದಿವೆ. ಬಂದೋಬಸ್ತ್ ಮಾಡಿದ್ದರು ಕೂಡ ಅಂಗಡಿಗೆ ಬೆಂಕಿ ಹಾಕಿದ್ದರು. ಕಲ್ಲು ತೂರಿದ್ದರು. ಇದರಲ್ಲಿ ನಿಷೇಧಿತ ಸಂಘಟನೆಯ ಕೈವಾಡದ ಸಂಶಯವಿದೆ. ಈ ಘಟನೆಗಳಿಗೆ ಕೇರಳದಿಂದ ಜನ ಬಂದಿದ್ದರು. ಹಾಗಾಗಿ, ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Edited By : PublicNext Desk
PublicNext

PublicNext

11/12/2024 02:37 pm

Cinque Terre

5.94 K

Cinque Terre

2

ಸಂಬಂಧಿತ ಸುದ್ದಿ