ಚಿಕ್ಕಮಗಳೂರು: ಮಲೆನಾಡು ಹಾಗೂ ತುಳುನಾಡು ಭಾಗದ ಪ್ರಸಿದ್ಧ ದೈವರಾಧನೆಯು ತನ್ನದೇ ಧಾರ್ಮಿಕ ನಂಬಿಕೆ, ವಿಶಿಷ್ಟ ಆಚರಣೆ, ಕಟ್ಟುಪಾಡು, ನಿಯಮಗಳನ್ನು ಹೊಂದಿದ್ದು. ಆದರೆ ಇತ್ತೀಚಿನ ದಿನಗಳಲ್ಲಿ ದೈವನರ್ತನವನ್ನು ಸಭೆ, ಸಮಾರಂಭ, ರೀಲ್ಸ್ ಗಳಲ್ಲಿ ಮನೋರಂಜನಾ ಪ್ರದರ್ಶವನ್ನಾಗಿ ಮಾಡಿ ದೈವಾರಾಧನೆ ನಂಬಿಕೆಗಳಿಗೆ ಅಪಚಾರ ಮಾಡುವ ಪರಿಪಾಠ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುಲು ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ದೈವನರ್ತಕರು ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಕೇವಲ 11 ಜನ ದೈವ ನರ್ತಕರಿದ್ದು ನಮ್ಮ ಹೊರತುಪಡಿಸಿ ಕೆಲವರು ದೈವ ನರ್ತಕರ ವೇಷ ತೊಟ್ಟು ಅಪಮಾನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
PublicNext
11/12/2024 03:03 pm