ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ದತ್ತ ಜಯಂತಿ ಹಿನ್ನೆಲೆ ನಾಳೆಯಿಂದಲೇ ದತ್ತ ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಚಿಕ್ಕಮಗಳೂರು: ನಾಳೆಯಿಂದ ದತ್ತ ಜಯಂತಿ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ ದತ್ತ ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದತ್ತಾಪೀಠ ಸಂವರ್ಧನ ಸಮಿತಿಯ ಸದಸ್ಯ ಸುಮಂತ್ ಭಟ್ ತಿಳಿಸಿದ್ದಾರೆ. ಬೆಳಿಗ್ಗೆ ಗಣಪತಿ ಹೋಮ, ದುರ್ಗಾ ಹೋಮ, ನವಗ್ರಹ ಹೋಮಗಳು ನಡೆಯಲಿದ್ದು ಸಂಜೆ ವಾಸ್ತು ಹೋಮ, ಸುದರ್ಶನ ಹೋಮ, ದುರ್ಗಾ ದೀಪ ನಮಸ್ಕಾರಗಳು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಡಿ.12 ರಂದು ಬೆಳಗ್ಗೆ ರುದ್ರ ಹೋಮ, ಕಲಾ ಹೋಮ ನಡೆಸಿ ನಗರದಲ್ಲಿ ಮಧ್ಯಾಹ್ನ 3ಗಂಟೆಗೆ ಬೃಹತ್ ಶೋಭ ಯಾತ್ರೆ ನಡೆಸಲಾಗುವುದು ಎಂದರು. ಡಿ.14 ದತ್ತಾತ್ರೇಯ ಮೂಲ ಮಂತ್ರ ಮಹಾ ಹೋಮ ಹಾಗೂ ಗುಹೆಯೊಳಗೆ ವಿಶೇಷ ಪೂಜೆಗಳು ದತ್ತಾಪೀಠದ ಅರ್ಚಕರ ನೇತೃತ್ವದಲ್ಲಿ ನಡೆಯಲಿವೆ. ಈ ಮೂರು ದಿನಗಳಲ್ಲಿ ದತ್ತ ಪೀಠದ ಮುಂಭಾಗ ಹೋಮವನ್ನು ನಡೆಸಲು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ ಆದರೆ ಇವರಿಗೆ ನಮ್ಮ ಪತ್ರಕ್ಕೆ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಸುಮಂತ್ ಹೇಳಿದ್ರು.

Edited By : PublicNext Desk
Kshetra Samachara

Kshetra Samachara

11/12/2024 07:52 pm

Cinque Terre

600

Cinque Terre

0

ಸಂಬಂಧಿತ ಸುದ್ದಿ