ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಆಲ್ದೂರು ಗಲಾಟೆ ಪ್ರಕರಣ ಒಕ್ಕಲಿಗರು ತಮ್ಮ ಸ್ವಂತ ಹಣದಿಂದ ನಿವೇಶನ ಅಭಿವೃದ್ಧಿಪಡಿಸಿಲ್ಲ

ಚಿಕ್ಕಮಗಳೂರು : ದಲಿತರ ಸ್ಮಶಾನ ಜಾಗವನ್ನು ಸಾರ್ವಜನಿಕ ಸ್ಮಶಾನ ಜಾಗವನ್ನಾಗಿ ಮಾಡುವುದಾದರೆ ಜಿಲ್ಲೆಯ ಎಲ್ಲಾ ಸಾರ್ವಜನಿಕ ಸ್ಮಶಾನವನ್ನು ಸಾರ್ವಜನಿಕ ಗೊಳಿಸಿ ಎಂದು ಆಲ್ದೂರು ದಲಿತ ಸಂಘಟನೆಯ ಒಕ್ಕೂಟ ಬೇಡಿಕೆ ಇಟ್ಟಿದೆ. ನಾವು ಒಕ್ಕಲಿಗ ವಿರೋಧಿಯಲ್ಲ ಸ್ಮಶಾನವನ್ನು ಚಿತಾಗಾರ ಮಾಡಲು ನಮ್ಮ ಒಪ್ಪಿಗೆ ಇದೆ ಆದರೆ ಜಿಲ್ಲೆಯಲ್ಲಿರುವ ಸಣ್ಣಪುಟ್ಟ ಜಾತಿಗಳು ಸ್ವಂತ ಸ್ಮಶಾನ ಜಾಗವನ್ನು ಹೊಂದಿಲ್ಲ ಎಲ್ಲಾ ಸಮುದಾಯದ ಸ್ಮಶಾನಗಳನ್ನು ಸಾರ್ವತ್ರಿಕ ಗೊಳಿಸಿದರೆ ಒಳ್ಳೆಯದು ಅದರಲ್ಲೂ ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್ ಅವರಿಂದಲೇ ಇದು ಆರಂಭವಾಗಲಿ ಎಂದು ಡಿಎಸ್ಎಸ್ ಮುಖಂಡ ಯಲಗುಡಿಗೆ ಹೊನ್ನಪ್ಪ ಆಗ್ರಹಿಸಿದ್ದಾರೆ.

ಸದ್ಯ ಈ ಸ್ಥಳದಲ್ಲಿ ಸರ್ಕಾರಿ ಚಿತಾಗಾರ ಎಂದು ಬೋರ್ಡ್ ಹಾಕಿದ್ದು ಪಹಣಿಯಲ್ಲಿ ದಲಿತರ ರುದ್ರ ಭೂಮಿ ಎಂದೇ ಇದೆ. ಆದರೂ ಮೊನ್ನೆಯ ಘಟನೆಯ ವೇಳೆ ಅತಿಕ್ರಮ ಪ್ರವೇಶ ಎಂದು ಕೇಸ್ ದಾಖಲಾಗಿದೆ ನಮ್ಮ ಜಾಗಕ್ಕೆ ನಾವು ಹೋದರೆ ಅತಿಕ್ರಮವೇ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಭೀಮ್ ಆರ್ಮಿ ಮುಖಂಡ ಗಿರೀಶ್ ಈ ಪ್ರಕರಣ ಜಟಿಲಗೊಳ್ಳಲು ಜಿಲ್ಲಾಡಳಿತವೇ ನೇರ ಹೊಣೆಯಾಗಿದ್ದು, ಹಲವು ಬಾರಿ ದೌರ್ಜನ್ಯ ಸಮಿತಿ ಸಭೆಯಲ್ಲೂ ತಿಳಿಸಿದರು ಸಮಸ್ಯೆ ಬಗೆಹರಿಸಿಲ್ಲ ಎಂದು ಆರೋಪಿಸಿದ್ದಾರೆ.

ಅಲ್ಲದೇ ಆ ಜಾಗವನ್ನು ಗ್ರಾಮ ಪಂಚಾಯಿತಿಯಿಂದ ಲಕ್ಷಾಂತರ ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗಿದೆ ಆದರೆ ಅವರು ಮಾಡಿರುವ ಖರ್ಚು ಸರ್ಕಾರದ ದುಡ್ಡೇ ಹೊರತು ಅವರ ಮನೆಯ ದುಡ್ಡಲ್ಲ ಎಂದು ಆರೋಪಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

11/12/2024 05:25 pm

Cinque Terre

1.46 K

Cinque Terre

0

ಸಂಬಂಧಿತ ಸುದ್ದಿ