ಚಿಕ್ಕಮಗಳೂರು: ನಾಳೆಯಿಂದ ದತ್ತ ಜಯಂತಿಗೆ ಹಿನ್ನೆಲೆಯಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಚಿಕ್ಕಮಗಳೂರು ನಗರದಾದ್ಯಂತ ಬೈಕ್ ರ್‍ಯಾಲಿ ನಡೆಸಲಾಯಿತು. ನಗರದ ಐಜಿ, ರಸ್ತೆ ಎಂಜಿ ರಸ್ತೆ, ಕೋಟೆ, ಬೇಲೂರು- ಹಾಸನ ರಸ್ತೆ, ಕಡೂರು ಎಐಟಿ ವೃತ, ಮಲ್ಲಂದೂರು ರಸ್ತೆ, ಮೂಡಿಗೆರೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ 300ಕ್ಕೂ ಹೆಚ್ಚು ಬೈಕುಗಳಲ್ಲಿ ದತ್ತ ಭಕ್ತರು ರ್‍ಯಾಲಿ ನಡೆಸಿದರು.
ಇದೇ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಜೈಕಾರ ಹಾಕಿದ ದತ್ತ ಭಕ್ತರು, ದತ ಜಯಂತಿ ಶೋಭಾ ಯಾತ್ರೆ ಹಾಗೂ ಪಾದುಕೆ ದರ್ಶನಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ನಗರದಲ್ಲಿ ಜಾಗೃತಿ ಮೂಡಿಸಿದರು. ನಾಳೆ ಸಂಕೀರ್ತನ ಯಾತ್ರೆ ಹಾಗೂ ಅನುಸೂಯ ಜಯಂತಿ ನಡೆಯುವ ಬೆನ್ನಲ್ಲೇ ಇಂದು ರ್‍ಯಾಲಿ ನಡೆಸಿದ್ದು ಗಮನ ಸೆಳೆಯಿತು.
ಚಿಕ್ಕಮಗಳೂರು ನಗರದಲ್ಲಿ ನಾಳೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಮಹಿಳೆಯರು ನಗರದಲ್ಲಿ ಅನುಸೂಯ ಜಯಂತಿಯಲ್ಲಿ ಪಾಲ್ಗೊಳ್ಳಲಿದ್ದು, ಬೋಳ ರಾಮೇಶ್ವರ ದೇವಾಲಯದಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ದತ್ತ ಜಯಂತಿಯ ಬೈಕ್ ರ್‍ಯಾಲಿ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಭದ್ರತೆ ವಹಿಸಿದ್ದು, ರ್‍ಯಾಲಿ ಉದ್ದಕ್ಕೂ ಪೊಲೀಸರು ದೇವರ ನಿಗವಹಿಸಿದ್ದರು.
Kshetra Samachara
11/12/2024 04:53 pm