ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಶಾಂತಿಯುತ ದತ್ತ ಜಯಂತಿಗೆ ಜಿಲ್ಲಾಡಳಿತ ಸನ್ನದ್ಧ - ಡಿಸಿ ಮೀನಾ ನಾಗರಾಜ್

ಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾಹಿತಿ ನೀಡಿದರು.

ದತ್ತಪೀಠದಲ್ಲಿ ಈಗಾಗಲೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಆಗಮಿಸುವ ಸಾವಿರಾರು ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ತುರ್ತು ಸಂದರ್ಭದಲ್ಲಿ ಆರೋಗ್ಯ ಘಟಕಗಳನ್ನು ಸ್ಥಾಪಿಸಲಾಗುವುದು, ಅಲ್ಲದೇ ಈಗಾಗಲೇ ಹಿಂದೂ, ಮುಸ್ಲಿಂ ಸಮುದಾಯದ ಪ್ರಮುಖರನ್ನು ಕರೆಸಿ, ಶಾಂತಿ ಸಭೆ ನಡೆಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಚಿಸಲಾಗಿದೆ ಎಂದರು.

ದತ್ತಪೀಠ ಭಾಗದಲ್ಲಿ ಕಿರಿದಾದ ರಸ್ತೆಗಳು ಇರುವ ಕಾರಣ ಅತಿ ಹೆಚ್ಚಿನ ವಾಹನಗಳು ದತ್ತ ಜಯಂತಿ ಸಂದರ್ಭದಲ್ಲಿ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಗಮಿಸುವ ಭಕ್ತರು ಲಾಂಗ್ ಚಾರ್ಸಿ ವಾಹನಗಳನ್ನು ತರದಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮನವಿ ಮಾಡಿದ್ದಾರೆ.

ಈಗಾಗಲೇ ದತ್ತಪೀಠ ಭಾಗದಲ್ಲಿ ಭಾರಿ ಮಳೆಯಿಂದಾಗಿ ಕೆಲವು ಕಡೆ ರಸ್ತೆ ಕುಸಿದಿದ್ದು, ಇದರಿಂದಾಗಿ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ಅಡ್ಡಿ ಉಂಟಾಗಬಾರದು ಎಂಬ ಕಾರಣಕ್ಕೆ ಬೃಹತ್ ವಾಹನಗಳನ್ನು ನಿಷೇಧಿಸಲಾಗಿದೆ ಎಂದರು.

ಒಂದು ವೇಳೆ ಲಾಂಗ್ ಚಾರ್ಸಿ ವಾಹನಗಳಲ್ಲಿ ಬಂದರೆ ಅಲ್ಲಂಪುರದ ಬಳಿ ಆ ವಾಹನಗಳನ್ನು ನಿಲ್ಲಿಸಿ ಜಿಲ್ಲಾ ಆಡಳಿತದಿಂದ ವ್ಯವಸ್ಥೆ ಮಾಡಿರುವ ಲಘು ವಾಹನಗಳಲ್ಲಿ ಹೋಗಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Edited By : Manjunath H D
PublicNext

PublicNext

09/12/2024 08:26 pm

Cinque Terre

23.65 K

Cinque Terre

0

ಸಂಬಂಧಿತ ಸುದ್ದಿ