ಚಿಕ್ಕಮಗಳೂರು : ದತ್ತ ಜಯಂತಿ ಹಿನ್ನೆಲೆ ಜಿಲ್ಲೆಯಾದ್ಯಂತ ಭದ್ರತೆಗಾಗಿ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಮಾಹಿತಿ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಬಾರಿ ದತ್ತ ಜಯಂತಿಗೆ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, 7 ಐಪಿಎಸ್ ಅಧಿಕಾರಿಗಳು, 27 ಡಿವೈಎಸ್ಪಿ, 65,ಎಸ್ಐ, 300 ಪಿಎಸ್ಐ, 500 ಹೋಂ ಗಾರ್ಡ್ ಗಳು ಸೇರಿದಂತೆ 20 ಕೆ.ಎಸ್.ಆರ್.ಪಿ, 28 ಡಿ.ಆರ್ ತುಕಡಿಗಳು ಹಾಗೂ ಬಾಂಬ್ ನಿಷ್ಕ್ರಿಯ ದಳ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ರ‍್ಯಾಪಿಡ್ ಆಕ್ಷನ್ ಫೋರ್ಸ್ ನಿಯೋಜನೆ ಮಾಡಲಾಗಿದೆ. ಹಾಗೂ 400 ಸಿಸಿ ಕ್ಯಾಮೆರಾಗಳು, 56 ಸ್ಪೆಷಲ್ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್, 100 ಬಾಡಿ ಕ್ಯಾಮೆರಾಗಳು, ನೂರಾರು ಹ್ಯಾಂಡಿಕ್ಯಾಮ್ ಗಳು, 28 ಚೆಕ್ ಪೋಸ್ಟ್‌ಗಳನ್ನು ಜಿಲ್ಲೆಯಾದ್ಯಂತ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಬ್ಯಾನರ್ ಬಂಟಿಂಗ್ಸ್ ಗಳನ್ನು ಅಳವಡಿಸಲು ಅನುಮತಿ ಕಡ್ಡಾಯವಾಗಿದ್ದು, ಏನ್.ಓ.ಸಿ ಪಡೆಯದಿದ್ದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ವಿಕ್ರಂ ಅಮಟೆ ನೀಡಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ನಡೆಯುವ ಶೋಭಾ ಯಾತ್ರೆ ಹಾಗೂ ಸಂಕೀರ್ತನೆ ಯಾತ್ರೆ ವೇಳೆ ಪಾಲ್ಗೊಳ್ಳುವ ದಿಕ್ಸೂಚಿ ಭಾಷಣಕಾರರು ಯಾವುದೇ ಪ್ರಚೋದನಾತ್ಮಕ ಹಾಗೂ ಅನ್ಯ ಧರ್ಮದವರಿಗೆ ಘಾಸಿ ಉಂಟಾಗುವ ರೀತಿಯಲ್ಲಿ ಮಾತನಾಡಬಾರದೆಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಅನ್ವಯ ತಿಳಿಸಿರುತ್ತೇವೆ. ಅದನ್ನು ತಪ್ಪಿ ಭಾಷಣ ಮಾಡಿದರೆ ಕಠಿಣ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
Kshetra Samachara
09/12/2024 08:17 pm