ಚಿಕ್ಕಮಗಳೂರು : ಇಂದಿನಿಂದ 3 ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಚಾಲನೆ ದೊರಕಿದೆ. ಅನುಸೂಯ ಜಯಂತಿಯೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದು, ನಗರದ ಬೋಳರಾಮೇಶ್ವರ ದೇವಾಲಯದಿಂದ ಪಾಲಿಟೆಕ್ನಿಕ್ ವರೆಗೆ ಮೆರವಣಿಗೆ ನಡೆಸಲಾಯಿತು. ದತ್ತಾತ್ರೇಯ ವಿಗ್ರಹ ದೊಂದಿಗೆ ಹೊರಟ ಮೆರವಣಿಗೆಯಲ್ಲಿ ಅಪಾರ ಸಂಖ್ಯೆ ಮಹಿಳೆಯರು ಭಾಗವಹಿಸಿದ್ದು, ದತ್ತ ಭಜನೆ ಅನಸೂಯ ಭಜನೆ ಯೊಂದಿಗೆ ಮೆರವಣಿಗೆ ಸಾಗಿತು.ಮಹಿಳೆಯರು ಮೆರವಣಿಗೆ ಬಳಿಕ ದತಪೀಠಕ್ಕೆ ತೆರಳಿ ದತ್ತ ಪಾದುಕೆಗಳಿಗೆ ಪೂಜೆ ಸಲ್ಲಿಸಿ, ಹೋಮ ಹವನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
PublicNext
12/12/2024 02:53 pm