ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಗೃಹಿಣಿಯನ್ನು ಬರ್ಬರವಾಗಿ ಹತ್ಯೆಗೈದ ವಾಟ್ಸಪ್ ಸ್ನೇಹಿತ

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದ ಯುವಕ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಎದುರೇ ಗೃಹಿಣಿಯನ್ನು ಚಾಕುವಿನಿಂದ ಚುಚ್ಚಿದಾಗಲೂ ಸಾಯದಿದ್ದಾಗ ಎಳೆದೊಯ್ದು ಕೆರೆಗೆ ಬಿಸಾಡಿರುವ ಘಟನೆ ನರಸಿಂಹರಾಜಪುರ ತಾಲೂಕಿನ ಕಿಚ್ಚೇಬಿ ಗ್ರಾಮದಲ್ಲಿ ನಡೆದಿದೆ.

ಕಿಚ್ಚೇಬಿ ಗ್ರಾಮದ ಮಹಿಳೆ ತೃಪ್ತಿ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದ ಚಿರಂಜೀವಿ ಎಂಬಾತ ಈ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಹಲವು ದಿನಗಳಿಂದ ಇಬ್ಬರು ಸ್ನೇಹಿತರಾಗಿದ್ದರು. ತಿಂಗಳ ಹಿಂದೆ ಚಿರಂಜೀವಿ ಜೊತೆ ತೃಪ್ತಿ ಮನೆ, ಕುಟುಂಬವನ್ನೆಲ್ಲ ಬಿಟ್ಟು ಓಡಿ ಹೋಗಿದ್ದಳು. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಕೂಡ ದಾಖಲಾಗಿತ್ತು. ವಾಪಸ್ ಬಂದ ಬಳಿಕ ಮನೆಯವರು, ಪೊಲೀಸರು ರಾಜಿ ಸಂಧಾನ ಮಾಡಿದ ಬಳಿಕ ಚಿರಂಜೀವಿ ಜೊತೆ ಮಾತು ಹಾಗೂ ಸ್ನೇಹವನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಕ್ ಮಾಡಿದ್ದಳು ಎನ್ನಲಾಗಿದೆ. ಸಂಪೂರ್ಣ ಮಾತು ಬಿಟ್ಟ ಪರಿಣಾಮ ಕೋಪಗೊಂಡ ಚಿರಂಜೀವಿ ಇಂದು ಮಧ್ಯಾಹ್ನ ಏಕಾಏಕಿ ಮನೆಗೆ ನುಗ್ಗಿ ತೃಪ್ತಿಯ ಮೇಲೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಷ್ಟದರೂ ತೃಪ್ತಿ ಸಾಯದಿದ್ದಾಗ ಮನೆಯಿಂದ ಎಳೆದೊಯ್ದು ಗ್ರಾಮದ ಸಮೀಪದ ಕೆರೆಗೆ ಬಿಸಾಡಿದ್ದಾನೆ. ತೃಪ್ತಿ ಪತಿ ಕೆಲಸಕ್ಕೆ ಹೋಗಿದ್ದಾಗ ಈ ಕೃತ್ಯ ಎಸಗಿದ್ದು, ಘಟನೆಯಿಂದಾಗಿ ಗ್ರಾಮದ ಜನರು ಕೆಲಕಾಲ ಆತಂಕಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಪ್ರಕರಣ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಆರೋಪಿ ಕೊಲೆ ಬಳಿಕ ಪರಾರಿಯಾಗಿದ್ದಾನೆ.

Edited By : Ashok M
PublicNext

PublicNext

07/12/2024 07:27 pm

Cinque Terre

25.23 K

Cinque Terre

0

ಸಂಬಂಧಿತ ಸುದ್ದಿ