ಧಾರವಾಡ: ಇಂದು ವಿಶ್ವ ವಿಶೇಷಚೇತನರ ದಿನ. ಈ ದಿನವನ್ನು ಎಪಿಡಿ ಹಾಗೂ ಆರೂಢ ಸಂಸ್ಥೆಯವರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಧಾರವಾಡದ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಎರಡೂ ಸಂಸ್ಥೆಯವರು ವಿಶೇಷಚೇತನರ ಕಡೆಯಿಂದ ಕೇಕ್ ಕಟ್ ಮಾಡಿಸಿ ಆಚರಿಸಿದರು. ಇಷ್ಟೇ ಅಲ್ಲದೇ ಬೆನ್ನುಹುರಿ ಅಪಘಾತಕ್ಕೀಡಾದ ವಿಕಲಚೇತನರಿಗೆ ವೀಲ್ ಚೇರ್‌ಗಳನ್ನು ಎಪಿಡಿ ಸಂಸ್ಥೆಯ ಸಹ ನಿರ್ದೇಶಕ ರಮೇಶ ಗೊಂಗಡಿ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ವಿಶೇಷಚೇತನರಿಗೆ ಅವರದ್ದೇ ಹಕ್ಕು ಮತ್ತು ಕರ್ತವ್ಯಗಳಿವೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ರಾಜ್ಯದಲ್ಲಿ ಸುಮಾರು ಆರು ಲಕ್ಷ ವಿಶೇಷ ಚೇತನರಿಗೆ ನಮ್ಮ ಸಂಸ್ಥೆ ನೆರವಾಗಿದೆ. ಇನ್ನೂ ಹಲವಾರು ವಿಶೇಷ ಚೇತನರನ್ನು ಗುರುತಿಸಿ ಅವರ ಕಷ್ಟಕ್ಕೆ ಸ್ಪಂದನೆ ನೀಡುವ ಉದ್ದೇಶ ಇದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/12/2024 10:33 pm