ಧಾರವಾಡ: ಮಾದಕ ವಸ್ತುಗಳನ್ನು ಬಳಕೆ ಮಾಡದಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹುಬ್ಬಳ್ಳಿ, ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಧಾರವಾಡದ ಜೆಎಸ್ಎಸ್ ಕಾಲೇಜಿಗೆ ನಟ, ನಿರ್ದೇಶಕ ಉಪೇಂದ್ರ ಅವರು ಆಗಮಿಸಿದ್ದರು.
ಉಪೇಂದ್ರ ಅವರು ಹುಬ್ಬಳ್ಳಿಯಿಂದ ಧಾರವಾಡದ ಜೆಎಸ್ಎಸ್ ಕಾಲೇಜಿಗೆ ಬರುವುದು ಸುಮಾರು ಎರಡು ಗಂಟೆಯಷ್ಟು ತಡವಾಯಿತು. ಅಷ್ಟರಲ್ಲಾಗಲೇ ಜೆಎಸ್ಎಸ್ ಕಾಲೇಜು ಮೈದಾದನದಲ್ಲಿ ದೊಡ್ಡ ಪ್ರಮಾಣದಲ್ಲೇ ವಿದ್ಯಾರ್ಥಿಗಳು ಜಮಾಯಿಸಿದ್ದರು.
ನಟ ಉಪೇಂದ್ರ ಅವರು ಬರುವುದು ತಡವಾಗಿದ್ದರಿಂದ ವಿದ್ಯಾರ್ಥಿಗಳಿಗಾಗಿ ಅನೇಕ ಹಾಡುಗನ್ನು ಹಾಕಿ ರಂಜಿಸಲಾಯಿತು. ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ಕೆಲ ಮಾದಕ ಹಾಡುಗಳನ್ನೂ ಹಾಕಿ ವಿದ್ಯಾರ್ಥಿಗಳು ಹುಚ್ಚೆದ್ದು ಕುಣಿಯವುಂತೆ ಮಾಡಲಾಯಿತು. ಅನೇಕ ವಿದ್ಯಾರ್ಥಿಗಳು ತಮ್ಮ ತಮ್ಮ ಸ್ನೇಹಿತರನ್ನು ಮೇಲೆ ತೂರಿ ಅಸಭ್ಯವಾಗಿ ವರ್ತಿಸಿದ್ದು ಕಂಡು ಬಂತು.
ಅಷ್ಟೇ ಅಲ್ಲದೇ ಮಾದಕ ವಸ್ತುಗಳ ಬಳಕೆ ಕುರಿತ ಪ್ಲೇಕಾರ್ಡ್‌ಗಳನ್ನು ಗಾಳಿಯಲ್ಲಿ ವಿದ್ಯಾರ್ಥಿಗಳು ತೂರಾಡಿದರು. ಪೊಲೀಸರು, ಆ ರೀತಿ ವರ್ತನೆ ಮಾಡದಂತೆ ವಿದ್ಯಾರ್ಥಿಗಳಿಗೆ ತಾಕೀತು ಮಾಡಿದರೂ ವಿದ್ಯಾರ್ಥಿಗಳ ವರ್ತನೆ ಮಾತ್ರ ಬದಲಾಗಲಿಲ್ಲ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/12/2024 05:02 pm