ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಏಡ್ಸ್ ರೋಗ ಹತೋಟಿಗೆ ಜಾಗೃತಿ ಮುಖ್ಯ - ನ್ಯಾಯಾಧೀಶ ಅಬ್ದುಲ್ ಖಾದರ್

ಕುಂದಗೋಳ: ಏಡ್ಸ್ ರೋಗ ಭಯವಲ್ಲ ಬದಲಾಗಿ ಜಾಗೃತಿ ವಹಿಸಿದರೆ ರೋಗದಿಂದ ದೂರ ಇರಬಹುದು ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ್ ಖಾದರ್ ಹೇಳಿದರು.

ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ವಿಶ್ವ ಏಡ್ಸ್ ದಿನ ಮತ್ತು ವಿಶೇಷ ಚೇತನರ ದಿನಾಚರಣೆಯನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.

ಇನ್ನೂ ಅಂಗವೈಕಲ್ಯ ಹೊಂದಿದವರನ್ನು ದುರ್ಬಲರು ಎನ್ನಲಾಗದು ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆ ಆತ್ಮಸ್ಥೈರ್ಯ ಗಣನೀಯವಾಗಿದೆ ಎಂದರು.

ಈ ವೇಳೆ ವಕೀಲ ಯು.ಎಮ್.ಪಾಟೀಲ್ ಉಪನ್ಯಾಸ ನೀಡಿದರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ಗಾಯತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿ ಶಾರದಾ ನಾಡಗೌಡ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಬಿ.ಪಿ ಪಾಟೀಲ್, ಕಾರ್ಯದರ್ಶಿ ವಾಯ್.ಬಿ.ಬಳೇಬಾಳ, ಸಹಾಯಕ ಸರ್ಕಾರಿ ಅಭಿಯೋಜಕರಾದ ಚಂದ್ರಕಲಾ ಪ್ರಭಾಕರ, ಗೀತಾ ಜಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿರೇಶ ಅಂಗಡಿ ಉಪಸ್ಥಿತರಿದ್ದರು.

ಈ ವೇಳೆ ಏಡ್ಸ್ ರೋಗದ ಜಾಗೃತಿ ಸಾರುವ ಬಿತ್ತಿ ಪತ್ರ ಅನಾವರಣ ಮಾಡಲಾಯಿತು.

Edited By : Manjunath H D
Kshetra Samachara

Kshetra Samachara

03/12/2024 06:12 pm

Cinque Terre

7.21 K

Cinque Terre

0

ಸಂಬಂಧಿತ ಸುದ್ದಿ