ಮೈಸೂರು : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ಮಾಡಿರುವುದನ್ನ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಅರಮನೆಯ ಕೋಟೆ ಆಂಜನೇಯ ದೇಗುಲದ ಬಳಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನೂರಾರು ಜನರು ಭಾಗಿಯಾಗಿ ಪ್ರತಿಭಟನೆ ನಡೆಸಿದರು.
ಹಿಂದೂ ಸಂತ ಚಿನ್ಮಯ್ ದಾಸರನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡಬೇಕು. ಹಿಂದೂಗಳ ರಕ್ಷಣೆ ನಮ್ಮ ಹೊಣೆ, ಹಿಂದೂಗಳಿಗೂ ಬದುಕುವ ಹಕ್ಕಿದೆ ಅಲ್ಲವೇ.? ಮಾನವ ಹಕ್ಕುಗಳು ಹಿಂದೂಗಳಿಗೂ ಇದೆಯಲ್ಲವೇ.? ಹೆಣ್ಣು ಮಕ್ಕಳ ಆಕ್ರಂದನ ಇನ್ನೂ ಕೇಳಿಸುತ್ತಿಲ್ಲವೇ.? ಬಾಂಗ್ಲಾದೇಶದ ಹಿಂದೂ ಸಹೋದರ ಸಹೋದರಿಯರಿಗಾಗಿ ನಾವು ಹೋರಾಟ ಮಾಡುತ್ತೇವೆ ಎಂದರು.
PublicNext
04/12/2024 06:51 pm