ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಮಾಜಿ ಮುಡಾ ಆಯುಕ್ತ ಕಾಂತರಾಜು ವಿಚಾರಣೆ

ಮೈಸೂರು: ಸಿಎಂ ಮೇಲಿನ ಲೋಕಾಯುಕ್ತ ತನಿಖೆ‌ ಇದೀಗ ಕೊನೆ ಹಂತಕ್ಕೆ ಬಂದು ನಿಂತಿದ್ದು, ನಿನ್ನೆ ಮುಡಾ ಮಾಜಿ ಆಯುಕ್ತ ಕಾಂತರಾಜು ವಿಚಾರಣೆ ನಡೆದಿದೆ.

ಬರೋಬ್ಬರಿ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿ ಬಂದ ಕಾಂತರಾಜು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನನ್ನ ಅವಧಿಯ ಮುಡಾ ವ್ಯವಹಾರಗಳ ಬಗ್ಗೆ ವಿಚಾರಣೆಗೆ ಕರೆದಿದ್ರು. 2017ರಲ್ಲಿ ನಾನು ಮುಡಾ ಆಯುಕ್ತನಾಗಿದ್ದೆ. ಆ ವೇಳೆ ಪಾರ್ವತಿಯವರು ಪಡೆದಿದ್ದ ಭೂಮಿ ಪರಿಹಾರದ ಬಗ್ಗೆ ವಿಚಾರಣೆ ನಡೆದಿದೆ. 2017ರ ಪ್ರಾಧಿಕಾರ ಸಭೆಯಲ್ಲಿ ಅಭಿವೃದ್ಧಿ ಪಡಿಸದ ಭೂಮಿ ಕೊಡಲು ತೀರ್ಮಾನ ಮಾಡಿದ್ದೆವು. ಇದೆಲ್ಲದರ ಬಗ್ಗೆ ವಿಚಾರಣೆ ಆಗಿದೆ.‌ ತನಿಖೆ ಪ್ರಗತಿಯಲ್ಲಿದ್ದು, ಇದರಿಂದ ಯಾವುದನ್ನ ಹೆಚ್ಚು ಹೇಳಲಾರೆ. ಅಧಿಕಾರಿಯಾಗಿ ನನಗೂ ಕೆಲವು ನಿರ್ಬಂಧಗಳು ಇವೆ ಎಂದು ಹೇಳಿದ್ದಾರೆ.

Edited By : Suman K
PublicNext

PublicNext

29/11/2024 11:54 am

Cinque Terre

18.22 K

Cinque Terre

0

ಸಂಬಂಧಿತ ಸುದ್ದಿ