ಮೈಸೂರು: ಆಡಳಿತ ಪಕ್ಷ ಅವರದ್ದೇ ಇದೇ. ಹಾಗಾಗಿ, ಯಾವಾಗ್ಲೂ ಕೂಡ ಆಡಳಿತ ಪಕ್ಷವೇ ಉಪ ಚುನಾವಣೆ ಗೆಲ್ಲೋದು ಸಹಜ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವ್ರು, ನಾನು ಚನ್ನಪಟ್ಟಣ ಪ್ರಚಾರಕ್ಕೆ ಹೋಗಿಲ್ಲ. ಹರೀಶ್ ಗೌಡ, ವಿವೇಕಾನಂದ ಹೋಗಿದ್ರು. ಗೆಲ್ಲುತ್ತೇವೆ ಎಂದು ಹೇಳಿದ್ರು. ನಿಖಿಲ್ ಗೆಲ್ಲಬೇಕಿತ್ತು, ಆದ್ರೆ ಸೋತಿದ್ದಾರೆ. ಅಲ್ಲದೆ, ಧೈರ್ಯವಾಗಿ ಈ ಸೋಲನ್ನು ನಿಖಿಲ್ ಎದುರಿಸಬೇಕು. ಎಷ್ಟೋ ಜನರು ಹಲವು ಬಾರಿ ಸೋತು, ಬಳಿಕ ಗೆದ್ದು ದೊಡ್ಡ ನಾಯಕರಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಎದೆಗುಂದದೆ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದ್ರು.
PublicNext
24/11/2024 07:44 am